ರಾಹುಲ್‌ ಗಾಂಧಿಯನ್ನ ಕಿಚಾಯಿಸಿದ ರಷ್ಯಾ ಮೂಲದ ಚೆಸ್‌ ಆಟಗಾರ!

masthmagaa.com:

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವ್ರ ಅಮೇಠಿ ಪಲಾಯನ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಸದ್ದು ಮಾಡ್ತಿರೋ ನಡುವೆಯೇ ಇದೀಗ ರಷ್ಯಾದಿಂದಲೂ ಟೀಕೆ ಕೇಳಿಬಂದಿದೆ. ಇತ್ತೀಚೆಗಷ್ಟೇ ರಾಹುಲ್‌ ಗಾಂಧಿಯವ್ರು ತಮ್ಮ ಮೊಬೈಲ್‌ನಲ್ಲಿ ಚೆಸ್‌ ಆಟವಾಡ್ತಿದ್ದು… ರಾಜಕಾರಣಿಗಳಲ್ಲಿ ಬಹಳ ಚೆನ್ನಾಗಿ ಚೆಸ್‌ ಆಡೋದಂದ್ರೆ ಅದು…ತಾವೇ ಅಂತ ಹೇಳ್ಕೊಂಡಿದ್ರು. ಜೊತೆಗೆ ತಮ್ಮ ಫೆವರೆಟ್‌ ಚೆಸ್‌ ಪ್ಲೇಯರ್‌ ರಷ್ಯಾದ ಗ್ಯಾರಿ ಕಾಸ್ಪರೋವ್‌ ಅಂತಾನೂ ಹೇಳಿದ್ರು. ಇದಕ್ಕೆ ಆನ್‌ಲೈನ್‌ನಲ್ಲಿ ಓರ್ವ ವ್ಯಕ್ತಿ ಕಮೆಂಟ್‌ ಮಾಡಿ, ʻಸದ್ಯ ಕಾಸ್ಪರೋವ್‌ ಅವ್ರು ಬೇಗನೇ ರಿಟಾಯರ್‌ ಆದ್ರು… ಇಲ್ಲಾಂದ್ರೆ ಈ ಚೆಸ್‌ ಜೀನಿಯಸ್‌ನ್ನ ಎದುರಿಸ್ಬೇಕಾಗಿತ್ತುʼ ಅಂತೇಳಿ ಕಾಲೆಳೆದಿದ್ದಾರೆ. ಆಶ್ಚರ್ಯ ಅನ್ನೋ ಹಾಗೇ ಈ ಕಾಮೆಂಟ್‌ಗೆ ಖುದ್ದು ಚೆಸ್‌ ಆಟಗಾರ ಗ್ಯಾರಿ ಕಾಸ್ಪರೋವ್‌ ಪ್ರತಿಕ್ರಿಯೆ ನೀಡಿ, ʻಟಾಪ್‌ ಆಟಗಾರರನ್ನ ಚಾಲೆಂಜ್‌ ಮಾಡೋ ಮೊದ್ಲು, ರಾಹುಲ್‌ ಗಾಂಧಿಯವ್ರು ತಮ್ಮ ಕ್ಷೇತ್ರ ರಾಯ್ಬರೇಲಿನಲ್ಲಿ ಗೆಲ್ಲಲ್ಲಿʼ ಅಂತ ಕಾಲೆಳೆದಿದ್ದಾರೆ. ಆದ್ರೆ ಇದು ವಿಪರೀತ ಚರ್ಚೆಯಾಗೋಕೆ ಶುರುವಾದ ತಕ್ಷಣ ಮತ್ತೊಂದು ಟ್ವೀಟ್‌ ಮಾಡಿ, ನನ್ನ ಸಣ್ಣ ಜೋಕ್‌ನ ಪಾಲಿಟಿಕಲ್‌ ಕಮೆಂಟ್‌ ಅಂತ ತಗೋಬಾರ್ದು. ಎಲ್ಲವನ್ನ ಸೂಕ್ಷ್ಮವಾಗಿ ಗಮನಿಸೋ ನಾನು, ನನ್ನ ಇಷ್ಟದ ಆಟ ಚೆಸ್‌ ಬಗ್ಗೆ ಒಬ್ಬ ರಾಜಕಾರಣಿ ಮಾತಾಡಿದಾಗ ಗಮನಿಸದೇ ಇರೋಕಾಗ್ಲಿಲ್ಲ ಅಂದಿದ್ದಾರೆ.

-masthmagaa.com

Contact Us for Advertisement

Leave a Reply