ಭಾರತದ ನಂ.1 ಶ್ರೀಮಂತ, ಅಂಬಾನಿ ಸೈಡ್‌ ಹಾಕಿದ ಅದಾನಿ!

masthmagaa.com:

ಹಳೇ ವರ್ಷ ಹೋಗಿ ಹೊಸ ವರ್ಷ ಬಂದ್ಮೇಲೆ ಯಾರ ಲೈಫು ಚೇಂಜ್‌ ಆಯ್ತೋ ಇಲ್ವೋ ಗೊತ್ತಿಲ್ಲ ಆದ್ರೇ ಗೌತಮ್‌ ಅದಾನಿಯವ್ರ ಅದೃಷ್ಟವಂತೂ ಸಂಪೂರ್ಣ ಬದಲಾಗಿದೆ. ಹಿಂಡನ್‌ಬರ್ಗ್‌ ಪ್ರಕರಣದಲ್ಲಿ ಸುಪ್ರೀಂ ತೀರ್ಪು ಬೆನ್ನಲ್ಲೇ ಗೌತಮ್‌ ಅದಾನಿ, ಮತ್ತೆ ಮುಖೇಶ್‌ ಅಂಬಾನಿಯವ್ರನ್ನ ಬೀಟ್‌ ಮಾಡಿ ಭಾರತ ಅಷ್ಟೇ ಅಲ್ಲದೇ ಏಷ್ಯಾದ ನಂ.1 ಶ್ರೀಮಂತ ಪಟ್ಟವನ್ನ ಅಲಂಕರಿಸಿದ್ದಾರೆ. ಬ್ಲೂಮ್‌ಬರ್ಗ್‌ ಬಿಲೇನಿಯರ್ಸ್‌ ಇಂಡೆಕ್ಸ್‌ ಪ್ರಕಾರ ಅದಾನಿ 97.6 ಬಿಲಿಯನ್‌ ಡಾಲರ್‌ (ಅಂದ್ರೆ ಸುಮಾರು 8 ಲಕ್ಷ ಕೋಟಿ) ನೆಟ್‌ವರ್ಥ್‌ ಹೊಂದೋ ಮೂಲಕ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಂಬಾನಿ ಮೀರಿಸಿ 12ನೇ ಸ್ಥಾನಕ್ಕೇರಿದ್ದಾರೆ. ಒಂದ್‌ 5 ಸಾವಿರ ಕೋಟಿ ನೆಟ್‌ವರ್ಥ್‌ ಕಡಿಮೆ ಇರೋದ್ರಿಂದ ಅಂಬಾನಿ 13ನೇ ಸ್ಥಾನಕ್ಕಿಳಿದಿದ್ದಾರೆ. ಅಂದ್ಹಾಗೆ 2023ರ ಜನವರಿಯಲ್ಲಿ ಹಿಂಡನ್‌ಬರ್ಗ್‌ ಸಂಸ್ಥೆ, ಅದಾನಿ ಸಮೂಹ ಕೃತಕವಾಗಿ ಷೇರಿನ ಮೌಲ್ಯವನ್ನ ಏರಿಕೆ ಮಾಡಿದೆ ಅಂತ ಆರೋಪ ಮಾಡಿತ್ತು. ಇದ್ರ ಬೆನ್ನಲ್ಲೇ ಅದಾನಿ ಷೇರುಗಳು ಕುಸಿದು, ಸುಮಾರು 60% ಅದಾನಿ ಸಂಪತ್ತು ಕರಗಿ ಹೋಗಿತ್ತು. 69 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 5.7 ಲಕ್ಷ ಕೋಟಿ ನೀರಿನಂತೆ ಹರಿದು ಹೋಗಿತ್ತು. ಆದ್ರೆ ಸೆಬಿ ತನಿಖೆ ಅದಾನಿ ಪರ ವಾಲ್ತಿದ್ದಂತೆಯೇ ಮತ್ತೆ ಷೇರುಗಳು ಏರ್ತಾ ಬಂದಿದ್ವು. ಅದ್ರಲ್ಲೂ ಮೊನ್ನೆ ಸುಪ್ರೀಂ ಕೋರ್ಟ್‌ ಸೆಬಿ ತನಿಖೆಯಲ್ಲಿ ಯಾವುದೇ ದೋಷವಿಲ್ಲ, ಪ್ರತ್ಯೇಕ ತನಿಖೆ ನಡೆಸಲ್ಲ ಅಂತ ಹೇಳಿದ್ಮೇಲೆ ಲಕ್ಷ್ಮಿ ಕೃಪಾ ಕಟಾಕ್ಷ ಮತ್ತೆ ಅದಾನಿ ಮೇಲೆ ಬಿದ್ದಿದೆ. ವರ್ಷದ ಮೊದಲ ನಾಲ್ಕು ದಿನದಲ್ಲೇ ಅವ್ರ ನೆಟ್‌ವರ್ಥ್‌ 160 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 1.3 ಸಾವಿರ ಕೋಟಿ ಜಾಸ್ತಿಯಾಗಿದೆ. ಗುರುವಾರ ಒಂದೇ ದಿನ 767 ಕೋಟಿ ರುಪಾಯಿ ಆ್ಯಡ್‌ ಆಗಿದೆ. ಸುಮಾರು ಒಂದು ವರ್ಷ ಆದ ಲಾಸ್‌ ಒಂದೇ ತಿಂಗಳಲ್ಲಿ ರಿಕವರ್‌ ಆಗಿದೆ.

-masthmagaa.com

Contact Us for Advertisement

Leave a Reply