ಅಂಬಾನಿಗೆ ಸೆಡ್ಡು ಹೊಡೆದ ಅದಾನಿ! ಏನ್ ಮಾಡಿದ್ರು ಗೊತ್ತಾ?

masthmagaa.com:

ತನ್ನ ಸಾಮ್ರಾಜ್ಯನ ವಿಸ್ತರಿಸೋಕೆ ನೋಡ್ತಾ ಇರೋ ಅದಾನಿ ಗ್ರೂಪ್‌, ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಕಂಪನಿ ಸೌದಿಯ ಅರಾಮ್ಕೊದಲ್ಲಿ ಪಾಲನ್ನು ಖರೀದಿಸೋಕೆ ನೋಡ್ತಾ ಇದೆ ಅಂತ ವರದಿಗಳು ಹೇಳಿವೆ. ಈ ಸಂಬಂಧ ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌, ತೈಲ ಕಂಪನಿ ಅರಾಮ್ಕೊ ಮತ್ತು ಸೌದಿಯ ಪಬ್ಲಿಕ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ (ಪಿಐಫ್‌) ಜೊತೆ ಮಾತುಕತೆ ನಡೆಸಿದೆ ಅಂತ ಹೇಳಲಾಗ್ತಿದೆ. ಈ ಹಿಂದೆ ಅರಾಮ್ಕೊ ಜೊತೆ ಭಾರತದ ಬಿಲೇನಿಯರ್‌ ಮುಖೇಶ್ ಅಂಬಾನಿ ಕೂಡ ವ್ಯವಹಾರ ಕುದುರಿಸೋಕೆ ನೋಡಿದ್ರು. ಆದ್ರೆ ಯಾಕೋ ಏನು ಅದು ಅರ್ಧದಲ್ಲೇ ನಿಂತು ಹೋಗಿತ್ತು. ಹಲವು ವರ್ಷಗಳಿಂದ ಸೌದಿ ಅರೇಬಿಯಾ ಭಾರತದ ಜೊತೆಗಿನ ಸಂಬಂಧವನ್ನ ಗಟ್ಟಿ ಮಾಡ್ಕೊಳ್ಳೋಕೆ ನೋಡ್ತಾ ಇದೆ. ಈ ಹಿಂದೆ 2019ರಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ್ದ ಸೌದಿ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ 100 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 7.6 ಲಕ್ಷ ಕೋಟಿ ಭಾರತದಲ್ಲಿ ಹೂಡಿಕೆ ಮಾಡೋದಾಗಿ ಹೇಳಿದ್ರು.

-masthmagaa.com

Contact Us for Advertisement

Leave a Reply