ಲೆಜೆಂಡ್ಸ್‌ ಲೀಗಲ್ಲಿ ಗಂಭೀರ್-ಶ್ರೀಶಾಂತ್‌ ವಾಕ್‌-ಸಮರ! ಆಗಿದ್ದೇನು?

masthmagaa.com:

ಸೂರತ್‌ನಲ್ಲಿ ನಡೆದ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ ಪಂದ್ಯದ ನಡುವೆ ಮಾಜಿ ಕ್ರಿಕೆಟಿಗರಾದ ಗೌತಮ್‌ ಗಂಭೀರ್‌ ಹಾಗೂ ಎಸ್‌ ಶ್ರೀಶಾಂತ್‌ ಆನ್‌ ಫೀಲ್ಡ್‌ನಲ್ಲೇ ವಾಕ್‌ಸಮರ ನಡೆಸಿದ್ದಾರೆ. India Capitals ಹಾಗೂ Gujarat Giants ನಡುವಿನ ಪಂದ್ಯದಲ್ಲಿ ಈ ಸೀನ್‌ ಕ್ರಿಯೇಟ್‌ ಆಗಿತ್ತು. ಈ ಬಗ್ಗೆ ಪಂದ್ಯದ ನಂತರ ಇನ್ಸ್ಟಾಗ್ರಾಮ್‌ ಲೈವ್‌ ವೇಳೆ ಮಾತನಾಡಿದ ಶ್ರೀಶಾಂತ್‌, “ಗಂಭೀರ್‌ ಬಹಳ ಒರಟಾಗಿ ನಡೆದುಕೊಂಡ್ರು. ಅವ್ರು ಮಿಸ್ಟರ್‌ ಫೈಟರ್.‌ ಪಂದ್ಯದ ವೇಳೆ ನನ್ನನ್ನ ನೀನೊಬ್ಬ ʻಫಿಕ್ಸರ್‌ʼ ಅಂತ ಕರೆದ್ರು. ಅದ್ರಿಂದ ನಂಗೆ ನೋವಾಯ್ತು. ಅಲ್ಲದೆ ಅವಾಚ್ಯ ಶಬ್ಧವನ್ನ ಗಂಭೀರ್‌ ಬಳಸಿದ್ರು ಅಂತ ಶ್ರೀಶಾಂತ್‌ ಆರೋಪಿಸಿದ್ದಾರೆ. ಆದ್ರೆ ಈ ಬಗ್ಗೆ Xನಲ್ಲಿ ಪೋಸ್ಟ್‌ ಹಾಕಿರೋ ಗಂಭೀರ್.‌ ʻಜನರ ಗಮನ ಸೆಳೆಯೋಕೆ ಕೆಲವ್ರು ಏನೇನೋ ಸರ್ಕಸ್‌ ಮಾಡ್ತಾರೆʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply