ಗಾಜಾದ ಹಮಾಸ್ ಮಿಲಿಟರಿ ಸ್ಥಳಗಳ ಮೇಲೆ ಇಸ್ರೇಲ್ ಬಾಂಬಿಂಗ್!

masthmagaa.com:

ಅಫ್ಘಾನಿಸ್ತಾನದ ಪರಿಸ್ಥಿತಿ ಒಂದ್ಕಡೆಯಾದ್ರೆ ಅತ್ತ ಇಸ್ರೇಲ್ ಮತ್ತು ಗಾಜಾ ನಡುವಿನ ಸಂಘರ್ಷ ಕೂಡ ದಿನೇ ದಿನೇ ಜಾಸ್ತಿಯಾಗ್ತಿದೆ. ಗಾಜಾದ ಎರಡು ಸ್ಥಳಗಳಲ್ಲಿ ಇಸ್ರೇಲ್ ಸೇನೆ ಏರ್​ಸ್ಟ್ರೈಕ್ ನಡೆಸಿದೆ. ಗಾಜಾ ಗಡಿಯಿಂದ ಇಸ್ರೇಲ್ ಒಳಗೆ ಫೈರ್ ಬಲೂನ್​ಗಳನ್ನು ಕಳುಹಿಸಲಾಗ್ತಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಈ ಸ್ಟ್ರೈಕ್ ನಡೆಸಿದೆ. ಇದ್ರಲ್ಲಿ ಗಾಜಾದಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಮತ್ತು ಟ್ರೇನಿಂಗ್ ನೀಡಲು ಬಳಸಲಾಗುತ್ತಿದ್ದ ಎರಡು ಮಿಲಿಟರಿ ಕೇಂದ್ರಗಳನ್ನು ನಾಶ ಮಾಡಲಾಗಿದೆ ಅಂತ ಇಸ್ರೇಲ್ ಸೇನೆ ಮಾಹಿತಿ ನೀಡಿದೆ. ಆದ್ರೆ ಯಾವುದೇ ಸಾವು ನೋವಿನ ಬಗ್ಗೆ ಇನ್ನೂ ವರದಿಯಾಗಿಲ್ಲ.

-masthmagaa.com

Contact Us for Advertisement

Leave a Reply