ಅಧ್ಯಕ್ಷರನ್ನೇ ಕೆಳಗಿಳಿಸಲು ಸಜ್ಜಾದ ಜಾರ್ಜಿಯಾ ಸಂಸದರು, ಕಾರಣ ಏನು?

masthmagaa.com:

ರಷ್ಯಾ ಗಡಿಯಲ್ಲಿ ಇರುವ ಜಾರ್ಜಿಯ ದೇಶದ ಪ್ರೆಸಿಡೆಂಟ್‌ ಸಲೋಮ್‌ ಜು಼ರಾಬಿಶ್ವಿಲಿ ಅವರನ್ನ ಹುದ್ದೆಯಿಂದ ಕೆಳಗಿಳಿಸಲು ಅಲ್ಲಿನ ಕೋರ್ಟ್‌ ಆದೇಶ ನೀಡಿದೆ. 2018ರಿಂದ ಅಧಿಕಾರದಲ್ಲಿರೋ 71 ವರ್ಷದ ಪ್ರೆಸಿಡೆಂಟ್‌ ಜು಼ರಾಬಿಶ್ವಿಲಿ ಅವರು ಅನಧಿಕೃತವಾಗಿ ವಿದೇಶಿ ನಾಯಕರನ್ನ ಭೇಟಿಯಾಗಿ ಜಾರ್ಜಿಯಾವನ್ನ EU ಸೇರಿಸೋಕೆ ಲಾಬಿ ಮಾಡಿದ್ದಾರೆ. ಸರ್ಕಾರದ ಅನುಮತಿ ಪಡೆದಿಲ್ಲ ಅಂತ ಅಧಿಕಾರದಲ್ಲಿರೋ ಜಾರ್ಜಿಯನ್‌ ಡ್ರೀಮ್‌ ಪಾರ್ಟಿಯ MPಗಳು ಆರೋಪಿಸಿದ್ದರು. ಈ ವಿಚಾರವಾಗಿ ಕೋರ್ಟ್‌ ಜು಼ರಾಬಿಶ್ವಿಲಿ ಅವರು ಸರ್ಕಾರದ ಅನುಮತಿಯಿಲ್ಲದೇ ಈ ರೀತಿಯಾಗಿ ನಡೆದು ಜಾರ್ಜಿಯಾ ಸಂವಿಧಾನವನ್ನ ಉಲ್ಲಂಘಿಸಿದ್ದಾರೆ ಅಂತೇಳಿದೆ. ಇನ್ನು ಇವರನ್ನ ಅಧಿಕಾರದಿಂದ ಇಳಿಸೋಕೆ 100 ಮತಗಳ ಅವಶ್ಯಕತೆ ಇದ್ದು, ಇವರ ಪಾರ್ಟಿ ಸ್ಟ್ರೆಂತ್‌ 84 ಇದೆ. ಆದ್ರೆ ಜು಼ರಾಬಿಶ್ವಿಲಿ ಇಂಪೀಚ್‌ಮೆಂಟ್‌ಗೆ ಅಪೋಸಿಷನ್‌ ಅವರು ಸಪೋರ್ಟ್‌ ಮಾಡೋಕೆ ರೆಡಿ ಇಲ್ಲ. ಅಂದ್ಹಾಗೆ ಬಹಳ ವರ್ಷಗಳಿಂದ್ಲೂ ರಷ್ಯಾ ವಿರೋಧಿಯಾಗಿದ್ದ ಜಾರ್ಜಿಯ 2021ರಲ್ಲೇ EU ಸೇರಲು ಅಪ್ಲೈ ಮಾಡಿದೆ. ಆದ್ರೆ ರಷ್ಯಾ-ಯುಕ್ರೇನ್‌ ಯುದ್ಧ ಆರಂಭದ ನಂತರ ಇಲ್ಲಿನ ಸರ್ಕಾರ ರಷ್ಯಾ ಕಡೆ ವಾಲ್ತಾ ಇದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply