ಕೊರೋನಾ ಭೀತಿ: ಏಂಜೆಲಾ ಮರ್ಕೆಲ್​ಗೆ ಶೇಕ್​ ಹ್ಯಾಂಡ್​ ಕೊಡದ ಸಚಿವ

masthmagaa.com:

ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಶೇಕ್ ಹ್ಯಾಂಡ್ ಕೊಡಲು ಮುಂದಾದಾಗ ಸಚಿವನೊಬ್ಬ ಅದನ್ನ ನಯವಾಗಿ ತಿರಸ್ಕರಿಸಿದ ಘಟನೆ ನಡೆದಿದೆ. ಇದರಿಂದ ಮುಜುಗರಕ್ಕೊಳಗಾದ ಏಂಜೆಲಾ ಮರ್ಕೆಲ್ ಪರವಾಗಿಲ್ಲ ಎಂದಿದ್ದಾರೆ. ಅಲ್ಲದೆ ಪಕ್ಕದಲ್ಲಿದ್ದ ಮತ್ತೊಬ್ಬ ಸಚಿವನಿಗೆ ದೂರದಿಂದಲೇ ಕೈ ತೋರಿಸಿ ಹಾಯ್ ಹೇಳಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ಕೊರೋನಾ ವೈರಸ್​ ಭೀತಿ. ಜರ್ಮನಿಯಲ್ಲಿ ಇದುವರೆಗೆ 157 ಜನರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಶೇಕ್ ಹ್ಯಾಂಡ್​ ಮಾಡುವುದರಿಂದ ಕೂಡ ವೈರಸ್ ಹರಡುವ ಸಾಧ್ಯತೆ ಇದೆ ಅಂತ ಆರೋಗ್ಯ ತಜ್ಞರು ಹೇಳಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ ಪ್ರಾಂತ್ಯದಲ್ಲಿ ಕಾಣಿಸಿಕೊಂಡು ವಿಶ್ವದ ಇತರ ದೇಶಗಳಿಗೂ ಹರಡಿರುವ ಕೊರೋನಾ ವೈರಸ್ 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿದೆ.

-masthmagaa.com

https://www.youtube.com/watch?v=IgeLhR3GGPQ

 

Contact Us for Advertisement

Leave a Reply