ದಕ್ಷಿಣ ಚೀನಾ ಸಮುದ್ರಕ್ಕೆ ಜರ್ಮನಿಯ ಯುದ್ಧನೌಕೆ ಎಂಟ್ರಿ!

masthmagaa.com:

ಜರ್ಮನಿ ದಕ್ಷಿಣ ಚೀನಾ ಸಮುದ್ರಕ್ಕೆ ಯುದ್ಧನೌಕೆಯೊಂದನ್ನು ಕಳುಹಿಸಿದೆ. ಕಳೆದೆರಡು ದಶಕಗಳಲ್ಲೇ ಇದೇ ಮೊದಲ ಬಾರಿಗೆ ಈ ಹೆಜ್ಜೆ ಇಟ್ಟಿದೆ. ಈ ಮೂಲಕ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಪ್ರಾಬಲ್ಯವನ್ನು ತಡೆಯಲು ಪಾಶ್ಚಿಮಾತ್ಯ ದೇಶಗಳ ಜೊತೆ ಸೇರಿಕೊಂಡಿದೆ. ಅಂದಹಾಗೆ ದಕ್ಷಿಣ ಚೀನಾ ಸಾಗರ ಮತ್ತು ಅಲ್ಲಿರೋ ಕೆಲ ಭೂಭಾಗಗಳನ್ನು ನಂದೇ ಅಂತ ಹೇಳಿಕೊಂಡು ಬಂದಿದೆ ಚೀನಾ.. ಅದೂ ಅಲ್ಲದೆ ನೈಸರ್ಗಿಕ ಅನಿಲ ಮತ್ತು ಮೀನುಗಾರಿಕಯಂತಹ ನೈಸರ್ಗಿಕ ಸಂಪತ್ತು ಇರೋ ಭಾಗದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸಿ ಸೇನಾನೆಲೆಗಳನ್ನು ಮಾಡ್ತಿದೆ. ಹೀಗಾಗಿ ಅಮೆರಿಕ ಆಗಾಗ ಯುದ್ಧನೌಕೆ ಕಳುಹಿಸಿ ಚಮಕ್ ಕೊಡ್ತಾ ಇರುತ್ತೆ. ಅದೇ ರೀತಿ ಈಗ ಜರ್ಮನಿಯಿಂದಲೂ ಯುದ್ಧನೌಕೆ ಬಂದಿದೆ.

-masthmagaa.com

Contact Us for Advertisement

Leave a Reply