ʻʻಕೆಜಿಎಫ್‌ 3 ಗೆ ತಯಾರಾಗಿ ಅಂತ ಯಶ್‌ ಹೇಳಿದ್ರುʼʼ – ರವೀನಾ ಟಂಡನ್‌ !

masthmagaa.com:

ಕೆಜಿಎಫ್‌ 2 ಸಿನಿಮಾ ಬಿಡುಗಡೆ ಆಗಿ ಎಪ್ರಿಲ್‌ 14 ಕ್ಕೆ ಒಂದು ವರ್ಷವಾಯಿತು. ಈ ಬಗ್ಗೆ ಪೋಸ್ಟ್‌ ಮಾಡಿಕೊಂಡ ಹೊಂಬಾಳೆ ಸಂಸ್ಥೆ ಕೆಜಿಎಫ್‌ 3 ಸಿನಿಮಾ ಬಗ್ಗೆ ಚಿಕ್ಕ ಸುಳಿವು ನೀಡಿತ್ತು. ಇದೀಗ ಕೆಜಿಎಫ್‌ 2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ರವೀನಾ ಟಂಡನ್ ಸಂದರ್ಶನವೊಂದರಲ್ಲಿ ಕೆಜಿಎಫ್‌ 3 ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆ. ʻʻಕೆಜಿಎಫ್ 2 ಸಿನಿಮಾ ಒಂದು ವರ್ಷ ಪುರೈಸಿದೆ ದಿನದಂದು, ನನಗೆ ಮೊದಲು ಮೆಸೇಜ್ ಮಾಡಿದ್ದು ಯಶ್ ಪತ್ನಿ ರಾಧಿಕಾ ಪಂಡಿತ್, ಈ ಪಾತ್ರವನ್ನು ನೀವು ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಾ, ನೀವಲ್ಲದೇ ಬೇರೆ ಯಾರು ಈ ಪಾತ್ರವನ್ನು ಇಷ್ಟು ಚೆನ್ನಾಗಿ ಮಾಡುತ್ತಿರಲಿಲ್ಲ. ನಮ್ಮ ಜೀವನವನ್ನು ಬದಲಾಯಿಸಿದಕ್ಕೇ ಧನ್ಯವಾದಗಳು ಎಂದರು. ಅದೇ ದಿನ ಸಂಜೆ ಯಶ್ ಕರೆ ಮಾಡಿ, ನಾವು ಕೆಜಿಎಫ್ 3ಗೆ ರೆಡಿಯಾಗಬೇಕು ಎಂದರು. ನಾನು ಆ ಸಿನಿಮಾದಲ್ಲಿ ನನ್ನನ್ನೂ ಸಾಯಿಸಿಬಿಡಬೇಡ ಮತ್ತೆ ಎಂದೆ. ಹಾಗೇ ಪ್ರಶಾಂತ್ ಕೂಡ ಫೋನ್ ಮಾಡಿದ್ದರು. ಆದರೆ, ಕೆಜಿಎಫ್ -3 ಯಾವಾಗ ಬರುತ್ತೆ ಅನ್ನೋದು ನಮಗೆ ಗೊತ್ತಿಲ್ಲ. ನಾವೆಲ್ಲರೂ ಬೇಗ ಬರಲಿ ಅಂತ ಕಾಯುತ್ತಿದ್ದೇವೆ. ಪ್ರಶಾಂತ್ ನೀಲ್‌ ಪೋನ್ ಮಾಡಿ ಪ್ರತಿ ದೃಶ್ಯದಲ್ಲೂ ಅದ್ಭುತವಾಗಿ ಮಾಡಿದ್ದೀರಿ ಎಂದು ಹೇಳಿದ್ದರು. ನಾನು ಪ್ರತಿ ಸೀನ್‌ಗಳ ನಂತರ ಸರಿಯಾಗಿ ಮಾಡುತ್ತಿದ್ದಿನಾ ಎಂದು ಪ್ರಶಾಂತ್‌ ಅವರನ್ನ ಕೇಳುತ್ತಿದ್ದೆ. ಅವರು ಇನ್ನು ಹೆಚ್ಚು ಬೇಕು ಎನ್ನುತ್ತಿದ್ದರು. ನನಗೆ ನಾನು ಒವರ್‌ ಆಕ್ಟ್‌ ಮಾಡುತ್ತಿದ್ದೀನಾ ಅಂತ ಭಯವಾಗುತ್ತಿತ್ತು. ಸಿನಿಮಾ ರಿಲೀಸ್‌ ನಂತರ ತುಂಬಾ ಪ್ರಶಂಸೆಗಳು ಬಂದವು. ಆಮೇಲೆ ನಾನು ಪಾತ್ರಕ್ಕೆ ತಕ್ಕಂತೆ ನಟಿಸಿದ್ದೇನೆ ಎಂದು ತಿಳಿಯಿತುʼʼ ಎಂದೆಲ್ಲಾ ರವೀನಾ ಟಂಡನ್‌ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply