ಕುಶಿನಗರದಲ್ಲಿ ಏರ್​ಪೋರ್ಟ್​ ಉದ್ಘಾಟಿಸಿದ ಮೋದಿ! ಈ ಜಾಗದ ಮಹತ್ವವೇನು?

masthmagaa.com:

ಉತ್ತರಪ್ರದೇಶದ ಕುಶಿನಗರದಲ್ಲಿ ಇವತ್ತು ಪ್ರಧಾನಿ ಮೋದಿ ವಿಮಾನ ನಿಲ್ದಾಣ ಉದ್ಘಾಟಿಸಿದ್ಧಾರೆ. ಶ್ರೀಲಂಕಾದಿಂದ ಬಂದ ವಿಮಾನ ವಿಮಾನ ನಿಲ್ದಾಣದಲ್ಲಿ ಮೊದಲು ಲ್ಯಾಂಡ್ ಆಗಿದೆ. ಅದೇ ರೀತಿ ಮೊದಲ ವಿಮಾನ ಶ್ರೀಲಂಕಾಗೆ ಹಾರಿದೆ. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಈ ಏರ್​ಪೋರ್ಟ್​ ಸೇರಿದ್ರೆ ಈವರೆಗೆ ಉತ್ತರ ಪ್ರದೇಶದಲ್ಲಿ 9 ಏರ್​ಪೋರ್ಟ್​​ ಮತ್ತು ಟರ್ಮಿನಲ್ಸ್​ಗಳು ಸ್ಥಾಪನೆಯಾಗಿವೆ ಅಂದ್ರು. ಇದೇ ವೇಳೆ ಏರ್ ಇಂಡಿಯಾ ಸಂಸ್ಥೆಯ ಖಾಸಗೀಕರಣದಿಂದ ದೇಶದ ವಿಮಾನಯಾನ ಕ್ಷೇತ್ರಕ್ಕೆ ಹೊಸ ಶಕ್ತಿ ಬಂದಂತಾಗಿದೆ ಅಂದ್ರು.

ಇದೇ ವೇಳೆ ಕುಶಿನಗರ ಸ್ಥಳದ ಕುರಿತು ಮಾತನಾಡಿದ ಅವರು, ಭಗವಾನ್​ ಬುದ್ಧಗೆ ಸಂಬಂಧಿಸಿದ ಸ್ಥಳಗಳನ್ನು ಅಭಿವೃದ್ಧಿಪಡಿಸುತ್ತ, ಉತ್ತಮ ಸಂಪರ್ಕ ಮತ್ತು ಭಕ್ತಾದಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವತ್ತ ಗಮನ ಹರಿಸಲಾಗುತ್ತಿದೆ ಅಂತ ಹೇಳಿದ್ದಾರೆ. ಇದೇ ವೇಳೆ ಕುಶಿನಗರದಲ್ಲಿರೋ ಬುದ್ಧರ ಮಹಾಪರಿನಿರ್ವಾಣ ದೇಗುಲಕ್ಕೂ ಪ್ರಧಾನಿ ಮೋದಿ ಭೇಟಿ ನೀಡಿದ್ರು.

ಅಂದಹಾಗೆ ಇವತ್ತು ಮಹಾ ಅಭಿಧಾಮ ದಿನ ಕೂಡ ಹೌದು.. ಈ ದಿನ ಬುದ್ಧ ಮತ್ತೆ ಭೂಮಿಗೆ ಬಂದಿದ್ರು ಅನ್ನೋದು ಬೌದ್ಧ ಧರ್ಮದಲ್ಲಿನ ಒಂದು ನಂಬಿಕೆ. ಕುಶಿನಗರ ಬೌದ್ಧ ಧರ್ಮದ ಅತಿ ಪ್ರಮುಖವಾದ ಸ್ಥಳವಾಗಿದ್ದು, ಇಲ್ಲೇ ಅವರು ಅಂತಿಮವಾಗಿ ಮಹಾಪರಿನಿರ್ವಾಣ ಹೊಂದಿದ್ರು ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಇವತ್ತಿನ ಕಾರ್ಯಕ್ರಮಕ್ಕೆ ಮಯನ್ಮಾರ್, ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್​​, ಶ್ರೀಲಂಕಾ, ಭೂತಾನ್​​, ದಕ್ಷಿಣ ಕೊರಿಯಾ, ನೇಪಾಲ, ಜಪಾನ್, ಸಿಂಗಾಪುರ್ ಸೇರಿದಂತೆ ಬೌದ್ಧ ಧರ್ಮದ ದೇಶಗಳನ್ನು ಆಹ್ವಾನಿಸಲಾಗಿತ್ತು. ಅದ್ರ ರಾಜತಾಂತ್ರಿಕರು ಮತ್ತು ಬೌದ್ಧ ಬಿಕ್ಷುಗಳು ಇವತ್ತಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

-masthmagaa.com

Contact Us for Advertisement

Leave a Reply