ಘೋಸ್ಟ್‌ ಆಫ್‌ ಕಿಯೆವ್‌ ಪೈಲಟ್‌ ವೀರಮರಣ! ಮರಣೋತ್ತರವಾಗಿ ಗೌರವಿಸಿದ ಯುಕ್ರೇನ್‌

masthmagaa.com:

ಯುಕ್ರೇನ್‌ ಯುದ್ಧದ ಆರಂಭದ ದಿನಗಳಲ್ಲಿ ವ್ಯಾಪಕ ಸುದ್ದಿಯಾಗಿದ್ದ “ಘೋಸ್ಟ್‌ ಆಫ್‌ ಕಿಯೆವ್‌” ಪೈಲಟ್‌ ಈಗ ಮೃತಪಟ್ಟಿದ್ದಾರೆ ಅಂತ ವರದಿಯಾಗಿದೆ. ಯುದ್ಧದ ಮೊದಲ ದಿನವೇ ರಷ್ಯಾದ ಆರು ವಿಮಾನಗಳನ್ನ ಹೊಡೆದುರುಳಿಸಿದ ಮೇಜರ್‌ ಸ್ಟೆಪನ್‌ ತರಬಲ್ಕಾ ಅವ್ರನ್ನ ಯುಕ್ರೇನ್‌, ʼಗಾರ್ಡಿಯನ್‌ ಆಫ್‌ ಏಂಜೆಲ್‌ʼ ಅಂದ್ರೆ ದೇವದೂತ ಅಂತ ಕೊಂಡಾಡಿತ್ತು. ಆದ್ರೆ ಆವಾಗ ಇನ್ನೂ ಸ್ಟೆಫನ್‌ ಅವ್ರ ಐಡೆಂಟಿಟಿಯನ್ನ ಬಹಿರಂಗಪಡಿಸಿರ್ಲಿಲ್ಲ. ಹಾಗಾಗಿ ಇದು ಕೇವಲ ತನ್ನ ಸೈನಿಕರ ಆತ್ಮಸ್ಥೈರ್ಯ ಹೆಚ್ಚು ಮಾಡಲು ಯುಕ್ರೇನ್‌ ಮಾಡ್ತಾ ಇರೋ ಪ್ರಯತ್ನ ಅಂತ ಹೇಳಲಾಗ್ತಾ ಇತ್ತು. ಆದ್ರೆ ಈವಾಗ ಅದು ನಿಜ ಅಂತ ಗೊತ್ತಾಗಿದೆ. 29 ವರ್ಷದ ಸ್ಟೆಪನ್‌ ಇದುವರೆಗು ರಷ್ಯಾದ ಸುಮಾರು 40 ವಿಮಾನಗಳನ್ನ ಹೊಡೆದುರಿಳಿಸಿದ್ದಾರೆ ಅಂತ ಹೇಳಲಾಗ್ತಿದೆ. ತನ್ನ ಮಿಗ್‌-29 ವಿಮಾನದಲ್ಲಿ ಅಗಾಧ ಶತ್ರುಪಡೆಯ ಮೇಲೆ ಯುದ್ಧ ಮಾಡ್ತಿರೋವಾಗ ಮಾರ್ಚ್‌ 13ರಂದು ಮೃತಪಟ್ಟಿದ್ದಾರೆ ಅಂತ ಯುಕ್ರೇನ್‌ ಹೇಳಿದೆ. ಮರಣೋತ್ತರವಾಗಿ ಯುಕ್ರೇನ್‌ ಈಗ ಮೇಜರ್‌ ಸ್ಟೆಪನ್‌ ಅವ್ರಿಗೆ “ಆರ್ಡರ್‌ ಆಫ್‌ ದಿ ಗೋಲ್ಡನ್‌ ಸ್ಟಾರ್‌” ಅನ್ನೋ ಪದಕ ನೀಡಿ ಗೌರವಿಸಿದೆ.

-masthmagaa.com

Contact Us for Advertisement

Leave a Reply