ಸೂರ್ಯನ ಮೇಲೆ ಕಾಣಿಸಿಕೊಂಡ ಬೃಹತ್‌ ರಂಧ್ರ! ಭೂಮಿಗೆ ಎಫೆಕ್ಟ್‌ ಆಗ್ಬೋದಾ?

masthmagaa.com:

ಸೂರ್ಯನ ಮೇಲ್ಪದರವಾದ ಕೊರೋನಾದಲ್ಲಿ ಬೃಹತ್‌ ರಂಧ್ರವೊಂದು ಕಾಣಿಸಿಕೊಂಡಿದೆ. ಸುಮಾರು 8 ಲಕ್ಷ ಕಿಲೋಮೀಟರ್‌ ಅಗಲದ ಈ ರಂಧ್ರ ಬರುಬರುತ್ತ ದೊಡ್ಡದಾಗ್ತಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಈ ರಂಧ್ರ ಎಷ್ಟು ದೊಡ್ಡದಿದೆ ಅಂದ್ರೆ ಒಂದ್ರ ಪಕ್ಕ ಒಂದು ಅಂತ 60 ಭೂಮಿಗಳನ್ನ ಸೇರಿಸ್ಬೋದು. ಅಲ್ಲದೆ ಈ ರಂಧ್ರದಿಂದ ಅತಿ ವೇಗದ ಸೊಲಾರ್‌ ವಿಂಡ್ಸ್‌, ಸೌರ ಮಾರುತಗಳು ಭೂಮಿಯ ಕಡೆಗೆ ಬರುತ್ತವೆ ಅಂತೇಳಲಾಗ್ತಿದೆ. ಅಂದ್ಹಾಗೆ 11 ವರ್ಷಗಳಿಗೊಮ್ಮೆ ಸೂರ್ಯನಲ್ಲಿನ ಮ್ಯಾಗ್ನೆಟಿಕ್‌ ಆಕ್ಟಿವಿಟಿ ಹೆಚ್ಚು ಕಮ್ಮಿಯಾಗ್ತಾ ಇರುತ್ತೆ. 11 ವರ್ಷ ಹೆಚ್ಚಾಗಿ ಆದ್ರೆ ಇನ್ನ 11 ವರ್ಷ ಕಮ್ಮಿಯಾಗುತ್ತೆ. ಇದನ್ನ ಸೋಲಾರ್‌ ಸೈಕಲ್‌ ಅಂತ ಕರೀತಾರೆ. ಸದ್ಯ ಸೂರ್ಯ ತನ್ನ ಸೋಲಾರ್‌ ಸೈಕಲ್‌ನ ಪೀಕ್‌ನಲ್ಲಿ ಇರೋದ್ರಿಂದ ಈ ರಂಧ್ರ ಕಾಣಿಸಿಕೊಂಡಿದೆ ಅಂತೇಳಲಾಗ್ತಿದೆ. ಆದ್ರೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸೌರರಂಧ್ರ ಕಾಣಿಸಿಕೊಂಡಿದೆ. ಇನ್ನು ಸೌರಮಾರುತಗಳ ವಿಚಾರಕ್ಕೆ ಬಂದ್ರೆ, ಸೂರ್ಯನಿಂದ ಸೌರಮಾರುತಗಳು ಭೂಮಿಯ ಕಡೆಗೆ ಬರೋದು ಹೊಸದೇನಲ್ಲ. ನಿರಂತರವಾಗಿ ಅವು ಬರ್ತಾನೆ ಇರುತ್ವೆ. ಭೂಮಿಯ ಮ್ಯಾಗ್ನೆಟಿಕ್‌ ಫೀಲ್ಡ್‌ ಈ ಮಾರುತಗಳಿಂದ ನಮಗೆ ರಕ್ಷಣೆ ಕೊಡ್ತಾನೆ ಇದೆ. ಭೂಮಿಯ ಧ್ರುವ ಪ್ರದೇಶಗಳ ಆಕಾಶದಲ್ಲಿ ಚಿತ್ತಾರ ಬಿಡಿಸೊ ಅರೋರ ಬೊರಾಲಿಸ್‌ ಹಾಗೂ ಅರೋರ ಆಸ್ಟ್ರಾಲಿಸ್‌ಗೆ ಈ ಸೌರಮಾರುತ ಹಾಗೂ ಮ್ಯಾಗ್ನೆಟಿಕ್‌ ಫೀಲ್ಡ್‌ ನಡುವಿನ ಜುಗಲ್‌ಬಂದಿಯೇ ಕಾರಣ.

-masthmagaa.com

Contact Us for Advertisement

Leave a Reply