ನೀರಿನ ಟ್ಯಾಂಕ್ ಮೇಲಿಂದ ಹಾರಿದ ಜೀವಬಿಟ್ಟ ಯುವತಿ..!

ಮಧ್ಯಪ್ರದೇಶ: ಯುವತಿಯೊಬ್ಬಳು ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಈ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ 17 ವರ್ಷದ ಸಾಕ್ಷಿ ತಿವಾರಿ ನೀರಿನ ಟ್ಯಾಂಕ್ ಮೇಲೆ ಹತ್ತಿದ್ದಳು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮನವೊಲಿಕೆಗೆ ಯತ್ನಿಸಿದ್ದಾರೆ. ಟ್ಯಾಂಕ್ ಮೇಲೆ ಹೋಗಲು ಯತ್ನಿಸಿದ್ರು. ಆದ್ರೆ ನೀವು ಟ್ಯಾಂಕ್ ಮೇಲೆ ಬಂದ್ರೆ ನಾನು ಕೆಳಗೆ ಹಾರುತ್ತೇನೆ ಎಂದು ಯುವತಿ ಎಚ್ಚರಿಸಿದ್ಲು. ಆದ್ರೂ ಪೊಲೀಸರು ಟ್ಯಾಂಕ್ ಮೇಲೆ ಹೋದಾಗ ಯುವತಿ ಕೆಳಗೆ ಹಾರಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯ್ತಾದ್ರೂ ಅಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಆಕೆಯ ಕುಟುಂಬ ಇನ್ನೂ ಶೋಕದಲ್ಲಿದ್ದು, ಸ್ವಲ್ಪ ದಿನ ಬಿಟ್ಟು ವಿಚಾರಣೆ ಆರಂಭಿಸೋದಾಗಿ ಪೊಲೀಸರು ಹೇಳಿದ್ದಾರೆ.

Contact Us for Advertisement

Leave a Reply