ಕಾಲರಾ ರೋಗ ಹರಡುವಿಕೆಗೆ ಹವಾಮಾನ ಬದಲಾವಣೆಯೇ ಕಾರಣ: WHO

masthmagaa.com:

ಹವಾಮಾನ ಬದಲಾವಣೆಯಿಂದ ಜಾಗತಿಕವಾಗಿ ಕಾಲರಾ ವೇಗವಾಗಿ ಹರಡೋ ಸಾಧ್ಯತೆಯಿದೆ ಅಂತ WHO ಎಚ್ಚರಿಸಿದೆ. ಕಾಲಾರ ವಿಶ್ವಕ್ಕೆ ಬೆದರಿಕೆಯನ್ನ ಒಡ್ಡಿದ್ದು, ಸುಮಾರು 30 ದೇಶಗಳಲ್ಲಿ ಕಾಲರಾ ಸೋಂಕಿನ ಕೇಸ್‌ಗಳು ಕಳೆದ 5 ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿವೆ. ಸದ್ಯದ ಪರಿಸ್ಥಿತಿ ತುಂಬಾ ಕ್ರಿಟಿಕಲ್‌ ಆಗ್ತಿದ್ದು, ಭಾರಿ ಪ್ರಮಾಣದಲ್ಲಿ ಕಾಲರಾ ರೋಗ ಹರಡ್ತಾ ಇರೋದು ಭಯಾನಕವಾದ ವಿಚಾರವಾಗಿದೆ. ಹಲವು ವರ್ಷಗಳಿಂದ ಕಾಲರಾ ರೋಗ ಹಾಗೂ ಅದ್ರಿಂದ ಸಂಭವಿಸ್ತಾ ಇದ್ದ ಸಾವುಗಳನ್ನ ಕಂಟ್ರೋಲ್‌ ಮಾಡಲಾಗ್ತಿತ್ತು. ಆದ್ರೆ ಈಗ ಏಕಾಏಕಿ ಕಾಲರಾ ಕೇಸ್‌ಗಳು ಜಾಸ್ತಿಯಾಗ್ತಿವೆ.. ಇದಕ್ಕೆ ಕ್ಲೈಮೇಟ್‌ ಚೇಂಜ್‌ ಮುಖ್ಯ ಕಾರಣವಾಗಿದೆ ಅಂತ WHO ಹೇಳಿದೆ. ಅಂದ್ಹಾಗೆ ಕಾಲರಾ ರೋಗ ಇದು ಅತಿಸಾರ ಬೇಧಿಯಾಗಿದ್ದು ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ಹರಡುತ್ತೆ. ಹಾಗೂ ವಿಬ್ರಿಯೋ ಕಾಲರೆ ಅನ್ನೋ ಬ್ಯಾಕ್ಟೀರಿಯ ಕಾಲರಾ ರೋಗಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply