ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಅಮೆರಿಕ ಹಿಂದಿಕ್ಕಿದ ಚೀನಾ!

masthmagaa.com:

ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳುತ್ತಿದ್ದ ಅಮೆರಿಕ ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಚೀನಾಗಿಂತ ಹಿಂದೆ ಉಳ್ಕೊಳ್ತಿದೆ. ಇದೀಗ ಚೀನಾ ಅಮೆರಿಕವನ್ನೂ ಹಿಂದಿಕ್ಕಿ ವಿಶ್ವದ ಅತಿ ಶ್ರೀಮಂತ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 20 ವರ್ಷಗಳಲ್ಲಿ ವಿಶ್ವದ ಸಂಪತ್ತಿನಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ವಿಶ್ವದ ಒಟ್ಟು ಸಂಪತ್ತು 156 ಟ್ರಿಲಿಯನ್​ ಡಾಲರ್​​ನಿಂದು 514 ಟ್ರಿಲಿಯನ್ ಡಾಲರ್​​ಗೆ ಏರಿಕೆಯಾಗಿದೆ. ಇಲ್ಲಿ ಒಂದು ಟ್ರಿಲಿಯನ್ ಅಂದ್ರೆ ಒಂದು ಲಕ್ಷ ಕೋಟಿ ಅಂತ ಅರ್ಥ. ಒಂದು ಟ್ರಿಲಿಯನ್ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ 74 ಲಕ್ಷ ಕೋಟಿ ರೂಪಾಯಿಯಾಗುತ್ತೆ. ವಿಶ್ವದ ದೇಶಗಳ ಬ್ಯಾಲೆನ್ಸ್​​ಶೀಟ್​ ಮೇಲೆ ಕಣ್ಣಿಡೋ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್​​ ಮ್ಯಾಕೆಂಜೀ & ಕಂಪನಿ ಪ್ರಕಾರ ಚೀನಾ ಈಗ ವಿಶ್ವದ ಶ್ರೀಮಂತ ದೇಶವಾಗಿ ಹೊರೊಹೊಮ್ಮಿದೆ. ಇನ್ನು ಕಳೆದ 20 ವರ್ಷಗಳಲ್ಲಿ ಏರಿಕೆಯಾದ ಜಾಗತಿಕ ಸಂಪತ್ತಿನ ಪೈಕಿ ಚೀನಾದ ಪಾಲೇ ಮೂರನೇ ಒಂದರಷ್ಟಿದೆ. 2000ನೇ ಇಸವಿಯಲ್ಲಿ ಚೀನಾದ ಸಂಪತ್ತು ಬರೀ 7 ಟ್ರಿಲಿಯನ್ ಡಾಲರ್ ಆಗಿತ್ತು. ಆದ್ರೀಗ ಚೀನಾ ಸಂಪತ್ತು 120 ಟ್ರಿಲಿಯನ್​​ಗೆ ಏರಿಕೆಯಾಗಿದೆ. ಚೀನಾ 2000ನೇ ಇಸವಿಯಲ್ಲಿ ವಿಶ್ವ ವ್ಯಾಪಾರ ಸಂಘಟನೆಯನ್ನು ಸೇರಿಕೊಂಡಿತ್ತು. ಅಂಕಿ ಅಂಶಗಳಿಂದಲೇ ಚೀನಾ ಯಾವ ರೀತಿಯಲ್ಲಿ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬಹುದು. ಇನ್ನು 2000ನೇ ಇಸವಿಯಲ್ಲಿ 40 ಟ್ರಿಲಿಯನ್ ಡಾಲರ್​​ ಇದ್ದ ಅಮೆರಿಕದ ಸಂಪತ್ತು 50 ಟ್ರಿಲಿಯನ್ ಜಾಸ್ತಿಯಾಗಿ 90 ಟ್ರಿಲಿಯನ್​​​​​​​​​​​​​ ಡಾಲರ್​​​ಗೆ ಏರಿಕೆಯಾಗಿದೆ. ಆದ್ರೆ ಒಂದು ದುರಂತ ಅಂದ್ರೆ ಮೊದಲ ಎರಡು ಸ್ಥಾನಗಳಲ್ಲಿರೋ ಚೀನಾ ಮತ್ತು ಅಮೆರಿಕದ ಮೂರನೇ ಎರಡು ಭಾಗದಷ್ಟು ಸಂಪತ್ತು 10 ಪರ್ಸೆಂಟ್​​ನಷ್ಟು ಜನರ ಕೈಲಿದೆ. ಇನ್ನು ಜಗತ್ತಿನ ಒಟ್ಟು ಸಂಪತ್ತಿನ ಪೈಕಿ 68 ಪರ್ಸೆಂಟ್​​ನಷ್ಟು ಸಂಪತ್ತು ರಿಯಲ್ ಎಸ್ಟೇಟ್​ ಕೈಲಿದೆ. ಉಳಿದ ಸಂಪತ್ತು ಮೂಲಭೂತ ಸೌಕರ್ಯ, ಮಶೀನರಿ, ಉಪಕರಣಗಳ ರೂಪದಲ್ಲಿದೆ.

-masthmagaa.com

Contact Us for Advertisement

Leave a Reply