ಗೂಗಲ್‌ಗೆ 4 ಕೋಟಿ ದಂಡ ಕಟ್ಟುವಂತೆ ಹೇಳಿದ ಆಸ್ಟ್ರೇಲಿಯಾದ ನ್ಯಾಯಾಲಯ! ಯಾಕೆ ಗೊತ್ತಾ?

masthmagaa.com:

ಯುಟ್ಯೂಬ್‌ನಲ್ಲಿ ಮಾನಹಾನಿಕರ ವಿಡಿಯೋ ಪೋಸ್ಟ್‌ ಆಗಿದ್ದಕ್ಕೆ 515 ಸಾವಿರ ಡಾಲರ್‌ ಅಂದ್ರೆ ಸುಮಾರು 4 ಕೋಟಿ ದಂಡ ಕಟ್ಟುವಂತೆ ಆಸ್ಟ್ರೇಲಿಯಾ ಕೋರ್ಟ್‌ ಒಂದು ಗೂಗಲ್‌ ಸಂಸ್ಥೆಗೆ ಆದೇಶಿಸಿದೆ. ಜೊರ್ಡಾನ್‌ ಶಾಂಕ್ಸ್‌ ಅನ್ನೋವ್ರು, ಆಸ್ಟ್ರೇಲಿಯಾದ ರಾಜಕಾರಣಿ ಜಾನ್‌ ಬರಿಲಾರೋ ಅವ್ರ ನಿಷ್ಠೆ ಬಗ್ಗೆ ಪ್ರಶ್ನೆ ಮಾಡಿದ್ರು. ಜೊತೆಗೆ ಬರಿಲಾರೋ ಭ್ರಷ್ಟ ಅಂತ ಹೇಳಿ ಅದ್ರ ವಿಡಿಯೋವನ್ನ ಯುಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಿದ್ರು. ಇದಕ್ಕಾಗಿ ಬರಿಲಾರೋ ಕಳೆದ ಅಕ್ಟೋಬರ್‌ನಲ್ಲಿ ರಾಜಕೀಯವನ್ನೇ ಬಿಟ್ಟಿದ್ರು. ಈಗ ಆ ಪ್ರಕರಣವನ್ನ ವಿಚಾರಿಸಿರೋ ಆಸ್ಟ್ರೇಲಿಯಾದ ಫೆಡರಲ್‌ ಕೋರ್ಟ್‌ ಯುಟ್ಯೂಬ್‌ನ ಮಾತೃಸಂಸ್ಥೆ ಗೂಗಲ್‌ಗೆ ದಂಡ ವಿಧಿಸಿದೆ. ಜೊತೆಗೆ ಆ ಹಣವನ್ನ ಬಾರಿಲಾರೋಗೆ ಕೊಡುವಂತೆ ಹೇಳಿದೆ.

-masthmagaa.com

Contact Us for Advertisement

Leave a Reply