ಚಾಲ್ತಿಯಲ್ಲಿರದ GMAIL ಖಾತೆಗಳನ್ನ ಡಿಲೀಟ್‌ ಮಾಡಲು ಗೂಗಲ್‌ ಸಿದ್ದತೆ !

masthmagaa.com:

ಕಳೆದ ಎರಡು ವರ್ಷಗಳಿಂದ ಆಕ್ಟಿವ್‌ ಆಗಿ ಬಳಸದ ಜೀ-ಮೇಲ್‌ ಖಾತೆಗಳನ್ನ ಮುಚ್ಚಲು ನಿರ್ಧರಿಸಿರೋದಾಗಿ ಗೂಗಲ್‌ ಹೇಳಿದೆ. ಮುಂದಿನ ತಿಂಗಳಿಂದಲೇ ಗೂಗಲ್ ಈ ಕೆಲಸಕ್ಕೆ ಚಾಲನೆ ನೀಡಲಿದೆ. ಸಾರ್ವಜನಿಕರು ಸೇರಿದಂತೆ ಅನೇಕ ಕಂಪನಿಗಳ ಹೆಸರಿನ ಜೀ-ಮೇಲ್‌ ಖಾತೆಗಳು ಕಳೆದ ಅನೇಕ ವರ್ಷಗಳಿಂದ ಚಾಲ್ತಿಯಲ್ಲಿರದ ಕಾರಣ ಅವುಗಳನ್ನ ಕ್ಲೋಸ್‌ ಮಾಡಲಾಗುತ್ತೆ. ಈ ಬಗ್ಗೆ ಮೇ ತಿಂಗಳಲ್ಲೇ ಗೂಗಲ್‌ ವರದಿ ಪ್ರಕಟಿಸಿತ್ತು. ಇದೀಗ ಗೂಗಲ್‌ ಚಾಲ್ತಿಯಲ್ಲಿರದ ಖಾತೆಗಳನ್ನ ಪತ್ತೆ ಹಚ್ಚೋಕೆ ಗೂಗಲ್‌ ಡ್ರೈವ್‌, ಯುಟೂಬ್‌ ವೀಡಿಯೊ, ಪೋಟೋ ಶೇರ್‌, ಅಪ್ಲಿಕೇಶನ್‌ ಡೌನಲೋಡ್‌, ಮಾಹಿತಿ ಹುಡುಕುವಿಕೆ ಸೇರಿದಂತೆ ಈ ಕಾರ್ಯಗಳ ಬಳಕೆ ಪ್ರಕ್ರಿಯೆ ಆಧರಿಸಿ ಈ ಕ್ರಮ ಜರುಗಿಸೋದಾಗಿ ಕಂಪನಿ ಹೇಳಿದೆ.

-masthmagaa.com

Contact Us for Advertisement

Leave a Reply