ಸದನದಲ್ಲಿ ಮುಂದುವರಿದ ಪೆಗಾಸಸ್ ಗಲಾಟೆ! ವಿಪಕ್ಷಗಳ ಜಂಟಿ ಸಮರ

masthmagaa.com:

ಪೆಗಾಸಸ್ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಬೇಕು.. ಗೃಹಸಚಿವ ಅಮಿತ್ ಶಾ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಅಂತ 14 ವಿಪಕ್ಷಗಳು ಜಂಟಿ ಹೇಳಿಕೆ ನೀಡಿವೆ. ಪೆಗಾಸಸ್ ವಿಚಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದ್ದು, ಸರ್ಕಾರ ಇದರ ಚರ್ಚೆಗೆ ಅನುಮತಿ ನೀಡ್ತಿಲ್ಲ. ಈ ಮೂಲಕ ಅಹಂಕಾರ ತೋರಿಸ್ತಿದೆ. ಸದನದಲ್ಲಿ ಈ ವಿಚಾರವಾಗಿ ಆಗ್ತಿರೋ ಎಲ್ಲಾ ಅಡಚಣೆಗಳಿಗೂ ಸರ್ಕಾರವೇ ನೇರ ಹೊಣೆ ಅಂತ ವಿಪಕ್ಷಗಳು ಕಿಡಿಕಾರಿವೆ. ಇನ್ನು ರಾಜ್ಯಸಭೆಯಲ್ಲಿ ಪೆಗಾಸಸ್ ವಿಚಾರವಾಗಿ ಸದನದ ಬಾವಿಗಿಳಿದು ಪ್ರತಿಭಟಿಸಿದ 6 ಮಂದಿ ಟಿಎಂಸಿ ಸಂಸದರನ್ನು ಇವತ್ತು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ, ಸದನದಿಂದ ಹೊರಗೆ ಕಳುಹಿಸಲಾಯ್ತು.

-masthmagaa.com

 

Contact Us for Advertisement

Leave a Reply