ಸರ್ಕಾರ ಬಡ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗೆ ನೂಕುತ್ತಿದೆ: ಕರ್ನಾಟಕ ಹೈ ಕೋರ್ಟ್‌

masthmagaa.com:

ರಾಜ್ಯ ಸರ್ಕಾರಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸೋದರಲ್ಲಿ ಸಂಪೂರ್ಣವಾಗಿ ಸೋತಿರೋದನ್ನ ಕರ್ನಾಟಕ ಹೈ ಕೋರ್ಟ್‌ ಗಮನಿಸಿ ಮಹತ್ತರ ಆದೇಶ ನೀಡಿದೆ. ಒಂದ್ಹೊತ್ತಿನ ಊಟಕ್ಕೂ ಪರದಾಡುವ ಬಡವರು ಸರ್ಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ಹೋಗಬೇಕಾಗಿರುವ ಪರಿಸ್ಥಿತಿ ಬಂದೊದಗಿರೋದನ್ನ ಗಮನಿಸಿದೆ. ಸರ್ಕಾರಿ ಶಾಲೆಗಳಲ್ಲಿ ವಿಶ್ರಾಂತಿ ಕೊಠಡಿಗಳು ಮತ್ತು ಕುಡಿಯುವ ನೀರಿನ ಕೊರತೆಯಿರುವ ಬಗ್ಗೆ 2013 ರಲ್ಲಿ ಹೈ ಕೋರ್ಟ್‌ ಗಮನಕ್ಕೆ ಬಂದಿದ್ದರೂ, ಅಂದು ಸೂಕ್ತವಾದ ಕ್ರಮವನ್ನು ತೆಗೆದುಕೊಂಡಿಲ್ಲ. ಈ ತನಕ, ರಾಜ್ಯದ 464 ಸರ್ಕಾರಿ ಶಾಲೆಗಳಲ್ಲಿ ರೆಸ್ಟ್‌ರೂಮ್‌ಗಳ ಕೊರತೆ ಮತ್ತು 32 ಶಾಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಆಗದಿರುವುದನ್ನು ಹೈ ಕೋರ್ಟ್‌ ತಿಳಿಸಿದೆ. ಈ ಕುರಿತು ಅಸಮಧಾನ ವ್ಯಕ್ತಪಡಿಸಿದ ಹೈ ಕೋರ್ಟ್‌ 8 ವಾರದೊಳಗೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಅಫಿಡವಿಟ್‌ ನಿರ್ದೇಶಿಸಿದೆ.

-masthmagaa.com

Contact Us for Advertisement

Leave a Reply