ವೈಟ್‌ ಹೌಸ್‌ನಲ್ಲಿ ಸಿಕ್ತು ಟ್ರಂಪ್‌ಗೆ ಬರೆದ ಪ್ರೇಮ ಪತ್ರಗಳ ರಾಶಿ!

masthmagaa.com:

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗು ನಾರ್ಥ್‌ ಕೊರಿಯಾ ಸರ್ವಾಧಿಕಾರಿ ಕಿಮ್‌ ನ ಫ್ರೆಂಡ್ಸಿಪ್‌ ಬಗ್ಗೆಈಗ ಇಂಟರಸ್ಟಿಂಗ್‌ ವಿಚಾರ ಬೆಳಕಿಗೆ ಬಂದಿದೆ. ಕಿಮ್‌ ನ ಕೊರಿಯಾಗೆ ಒಂದ್ಸಲ ಸ್ಯಾಂಕ್ಷನ್‌ ಹೇರಿದ್ದ ಟ್ರಂಪ್‌ ಮತ್ತೊಂದ್ಸಲ ಮಾತುಕತೆಗೂ ಹೋಗ್ತಿದ್ರು. ಈ ಮೂಲಕ ಟ್ರಂಪ್‌ ಕಿಮ್‌ ಬಗ್ಗೆ ಯಾವ್‌ ರೀತಿ ಒಪೀನಿಯನ್‌ ಇಟ್ಕೊಂಡಿದಾರೆ ಅನ್ನೋದೇ ಅರ್ಥ ಆಗ್ತಿರ್ಲಿಲ್ಲ. ಆದ್ರೆ ಈಗ
ವೈಟ್‌ ಹೌಸ್‌ ನಲ್ಲಿ “ಪ್ರೇಮ ಪತ್ರಗಳು” ಸಿಕ್ಕಿದ್ದು ಅದನ್ನ ಕಿಮ್‌ ಟ್ರಂಪ್‌ ಗೆ ಬರ್ದಿದ್ರು ಅಂತ ಹೇಳಲಾಗ್ತಿದೆ. ಹೆಸರಿಲ್ಲದ ಈ ಪತ್ರಗಳ ಬಗ್ಗೆ ವೈಟ್‌ ಹೌಸ್ನಲ್ಲೇ ಕೂತೂಹಲ ಮೂಡಿದ್ದು”ಇದನ್ನ ಯಾರ್ದು ಅಂತ ನಿಖರವಾಗಿ ಹೇಳೋಕಾಗಲ್ಲ” ಅಂತ ವೈಟ್‌ ಹೌಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ರೆ 2018 ರ ವರ್ಜೀನಿಯಾ ರ್ಯಾಲಿಯಲ್ಲಿ ಟ್ರಂಪ್‌ ಮಾತನಾಡಿ “ನನಗೆ ಬ್ಯೂಟಿಫುಲ್‌ ಲೆಟರ್ ಗಳನ್ನ ಬರೆದಿದ್ದಾರೆ” ಅಂತ ಹೇಳಿದ್ರು. ಆದ್ರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟಿರ್ಲಿಲ್ಲ. ಆದ್ರೆ ಈಗ ಅವ್ರು ಹೇಳಿದ್ದು ಈ ಲೆಟರ್‌ಗಳ ಬಗ್ಗೆ ಇರ್ಬೊದಾ ? ಅಂತಾ ಚರ್ಚೆಯಾಗ್ತಿದೆ. ಅಂದಹಾಗೆ ಟ್ರಂಪ್‌ ರಾಜೀನಾಮೆ ಕೊಟ್ಟ ಬಳಿಕ ಕೆಲವೊಂದಷ್ಟು ವಸ್ತುಗಳನ್ನ ವೈಟ್‌ ಹೌಸ್‌ ನಲ್ಲೇ ಬಿಟ್ಟು ಹೋಗಿದ್ರು.

-masthmagaa.com

Contact Us for Advertisement

Leave a Reply