ಕೇಂದ್ರ ಸರ್ಕಾರಿ ನೌಕರರಿಗೆ 4% DA ಹೆಚ್ಚಿಸಲು ಸಂಪುಟ ಅಸ್ತು!

masthmagaa.com:

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಒಂದು ಬರೋ ಚಾನ್ಸಸ್‌ ಇದೆ. ಇಂದು ಅಂದ್ರೆ ಗುರುವಾರ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಡಿಯರ್ನೆಸ್‌ ಅಲೊವೆನ್ಸ್‌ ಅಥವಾ ತುಟ್ಟಿ ಭತ್ಯೆಯನ್ನ 4% ಏರಿಸಲಿದೆ ಅನ್ನೋ ವಿಚಾರ ಕೇಳಿಬಂದಿತ್ತು. ಕ್ಯಾಬಿನೇಟ್‌ ಈಗಾಗ್ಲೆ DA ಹೆಚ್ಚಿಸೋ ಪ್ರಪೋಸಲ್‌ಗೆ ಅಪ್ರೂವಲ್‌ ಕೊಟ್ಟಿದೆ ಅಂತೇಳಲಾಗ್ತಿದೆ. ಆದ್ರೆ ಬಿಸ್‌ ನ್ಯೂಸ್‌ ರೆಕಾರ್ಡ್‌ ಆಗೋ ಟೈಮಲ್ಲಿ ಈ ವಿಚಾರವಾಗಿ ಅಪೀಶಿಯಲ್‌ ಕನ್ಫರ್ಮೇಶನ್‌ ಬಂದಿಲ್ಲ. ಇನ್ನು ಈ 4% ಹೆಚ್ಚಳದಿಂದ DA ಹಾಗೂ ಡಿಯರ್‌ನೆಸ್‌ ರಿಲೀಫ್‌ 50% ರೀಚ್‌ ಆಗಲಿದೆ. ಇನ್ನು ಇದ್ರ ಜೊತೆ LPG ಸಬ್ಸಿಡಿ ಸ್ಕೀಮ್‌ ಅವಧಿಯನ್ನ ಒಂದು ವರ್ಷಗಳವರೆಗೆ ಎಕ್ಸ್‌ಟೆಂಟ್‌ ಮಾಡೋಕೆ ಸಂಪುಟ ಒಪ್ಪಿಗೆ ನೀಡಿರೋ ವಿಚಾರ ಕೂಡ ಹರಿದಾಡ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ಕೊಡ್ತಿದ್ದ ಸಬ್ಸಿಡಿಯನ್ನ ₹300ಕ್ಕೆ ಏರಿಸಲಾಗಿದೆ. ಸೋ ಈ ಸಬ್ಸಿಡಿ ಇನ್ನೂ ಒಂದು ವರ್ಷ ಎಕ್ಸ್‌ಟೆಂಡ್‌ ಆಗುತ್ತೆ.

-masthmagaa.com

Contact Us for Advertisement

Leave a Reply