ʼಭಾರತದ ವಿರುದ್ಧ ಕೆಲಸ ಮಾಡಲ್ಲ!ʼದಾರಿಗೆ ಬಂತು ಶ್ರೀಲಂಕಾ!

masthmagaa.com:

ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾವನ್ನು ನೆಲೆಯಾಗಿ ಅಥ್ವಾ ಅಸ್ತ್ರವಾಗಿ ಬಳಸಿಕೊ‍ಳ್ಳೋಕೆ ಅವಕಾಶ ನೀಡೋದಿಲ್ಲ ಅಂತ ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ. ಬ್ರಿಟನ್‌ ಮತ್ತು ಫ್ರಾನ್ಸ್‌ನ ಅಧಿಕೃತ ಪ್ರವಾಸದಲ್ಲಿರುವ ರನಿಲ್ ಅವರು ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿದ್ದು, ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾವನ್ನು ನೆಲೆಯಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಈ ವಿಷಯದಲ್ಲಿ ದ್ವೀಪ ರಾಷ್ಟ್ರ ‘ತಟಸ್ಥ’ವಾಗಿ ಉಳಿಯಲಿದ್ದು, ಚೀನಾದ ಜೊತೆಗೆ ಈ ಕುರಿತು ಯಾವುದೇ ಮಿಲಿಟರಿ ಒಪ್ಪಂದ ಆಗಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಶ್ರೀಲಂಕಾದಲ್ಲಿ ಚೀನಾದ ಮಿಲಿಟರಿ ಉಪಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಕ್ರಮ ಸಿಂಘೆ, ಚೀನಾದವರು ಸುಮಾರು 1500 ವರ್ಷಗಳಿಂದ ಶ್ರೀಲಂಕಾದಲ್ಲಿ ಇದ್ದಾರೆ. ಆದ್ರೆ ಇಲ್ಲಿಯವರೆಗೂ ಯಾವುದೇ ಮಿಲಿಟರಿ ನೆಲೆಯನ್ನ ಅವ್ರು ಹೊಂದಿಲ್ಲ . ಅಲ್ದೆ ನಮ್ಮ ದ್ವೀಪ ರಾಷ್ಟ್ರ ಚೀನಾದೊಂದಿಗೆ ಯಾವುದೇ ಮಿಲಿಟರಿ ಒಪ್ಪಂದವನ್ನು ಮಾಡಿಕೊಂಡಿಲ್ಲ. ಜೊತೆಗೆ ಚೀನಾ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳುತ್ತದೆ ಅಂತನೂ ನಾನು ಭಾವಿಸೋದಿಲ್ಲ ಅಂತ ವಿಕ್ರಮಸಿಂಘೆ ತಿಳಿಸಿದ್ದಾರೆ. ಇನ್ನು 2017ರಲ್ಲಿ 99 ವರ್ಷಗಳ ಕಾಲ ಅವಧಿಗೆ ಹಂಬನ್‌ತೋಟಾದ ದಕ್ಷಿಣ ಬಂದರನ್ನ ಚೀನಾ ಗುತ್ತಿಗೆಗೆ ಪಡೆದಿತ್ತು. ಈ ಭಾಗದಲ್ಲಿ ಚೀನಾದಿಂದ ಮಿಲಿಟರಿ ಬಳಕೆಯ ಯಾವುದೇ ಸಮಸ್ಯೆಗಳಿಲ್ಲ. ಹಂಬನ್‌ತೋಟ ಬಂದರನ್ನು ಚೀನಾದ ವ್ಯಾಪಾರಿಗಳಿಗೆ ನೀಡಲಾಗಿದ್ದರೂ, ಅದರ ಭದ್ರತೆಯನ್ನು ಶ್ರೀಲಂಕಾ ಸರ್ಕಾರವೇ ನಿಯಂತ್ರಿಸುತ್ತಿದೆ ಅಂತ ತಿಳಿಸಿದ್ದಾರೆ..ಅಂದ್ಹಾಗೆ ಕಳೆದ ವರ್ಷ ಚೀನಾದ ಬ್ಯಾಲಿಸ್ಟಿಕ್‌ ಮಿಸೈಲ್‌ ಮತ್ತು ಉಪಗ್ರಹ ಟ್ರ್ಯಾಕಿಂಗ್‌ ಹಡಗು ಯುವಾನ್‌ ವಾಂಗ್‌ 5 ಅನ್ನ ಹಂಬನ್‌ತೋಟ ಬಂದರಿನಲ್ಲಿ ನಿಲ್ಲಿಸೋಕೆ ಅವಕಾಶ ಕೊಟ್ಟಿದೆ ಅಂತ ಭಾರತ ಹಾಗೂ ಅಮೆರಿಕ ಕಳವಳ ವ್ಯಕ್ತಪಡಿಸಿದ್ದವು. ಇದೀಗ ಈ ಬಗ್ಗೆ ಶ್ರೀಲಂಕಾ ಅಧ್ಯಕ್ಷ ಸ್ಪಷ್ಟನೆ ಕೊಟ್ಟಿದ್ದು, ನಾವು ಭಾರತಕ್ಕೆ ಬೆದರಿಕೆಯೊಡ್ಡೋಕೆ ಬೇಸ್‌ ಆಗಿ ಕೆಲಸ ಮಾಡಲ್ಲ ಅಂತ ತಿಳಿಸಿದ್ದಾರೆ. ಅಂದ್ಹಾಗೆ ಶ್ರೀಲಂಕ ತೀವ್ರ ಆರ್ಥಿಕ ಬಿಕ್ಕಟ್ಟನ್ನ ಫೇಸ್‌ ಮಾಡ್ತಿದ್ದ ಟೈಮ್‌ನಲ್ಲಿ ಭಾರತ ಸಹಾಯ ಹಸ್ತ ಚಾಚಿತ್ತು. ಈ ವೇಳೆ ಔಷಧಗಳು, ಅಡುಗೆ ಅನಿಲ, ತೈಲ ಮತ್ತು ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನ ಪೂರೈಸೋಕೆ 3.9 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 31.9 ಸಾವಿರ ಕೋಟಿ ರೂಪಾಯಿ ಮೌಲ್ಯದ ನೆರವನ್ನ ನೀಡಿತ್ತು. ಅಷ್ಟೆ ಅಲ್ದೆ 1 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 8,200 ಕೋಟಿ ರೂಪಾಯಿ ಸಾಲವನ್ನ ವಿಸ್ತರಿಸೋದಾಗಿ ಕೂಡ ಭಾರತ ಹೇಳಿತ್ತು. ಜೊತೆಗೆ ಕೋವಿಡ್‌ ಸಮಯದಲ್ಲಿ ʻವ್ಯಾಕ್ಸಿನ್‌ ಮೈತ್ರಿʼ ಅಡಿಯಲ್ಲಿ ಸುಮಾರು 5 ಲಕ್ಷ ಡೋಸ್‌ ಕೋವಿಶೀಲ್ಡ್‌ ವ್ಯಾಕ್ಸಿನ್‌ನ್ನ ಶ್ರೀಲಂಕಾಗೆ ಭಾರತ ನೀಡಿತ್ತು. ಅಂದ್ಹಾಗೆ ಶ್ರೀಲಂಕಾದ ಸಂಕಷ್ಟದ ಸಮಯದಲ್ಲಿ ನೈಬರ್ಸ್‌ ಫಸ್ಟ್‌ ಅನ್ನೋ ನೀತಿಯಡಿ ಭಾರತ ಸಹಾಯ ಮಾಡುತ್ತಾ ಬಂದಿದೆ.

-masthmagaa.com

Contact Us for Advertisement

Leave a Reply