ಇಂಡಿಯಾ ಗೇಟ್ ಬಳಿ ತಲೆ ಎತ್ತಲಿದೆ ನೇತಾಜಿ ಪ್ರತಿಮೆ!

masthmagaa.com:

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಮೆ ಅನಾವರಣಗೊಳಿಸೋದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಬೋಸ್ ಅವರ ಪ್ರತಿಮೆ ಇನ್ನೂ ನಿರ್ಮಾಣ ಹಂತದಲ್ಲಿದೆ. ಅದು ನಿರ್ಮಾಣವಾಗೋವರೆಗೆ ಸುಭಾಶ್​ ಚಂದ್ರ ಬೋಸ್​​ ಅವರ ಹಾಲೋಗ್ರಾಂ ವ್ಯವಸ್ಥೆ ಮಾಡಲಾಗುತ್ತೆ.

ಅಂದಹಾಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಗ್ರಾನೈಟ್​​​​​ನಿಂದ ನಿರ್ಮಿಸಲಾಗ್ತಿದ್ದು, 28 ಅಡಿ ಎತ್ತರ, 6 ಅಡಿ ಅಗಲ ಇರಲಿದೆ. ಈ ಹಿಂದೆ ಇಂಗ್ಲೆಂಡ್​​ ರಾಜ 5ನೇ ಜಾರ್ಜ್​​​ ಪ್ರತಿಮೆ ಇಟ್ಟಿದ್ದ ಜಾಗದಲ್ಲೇ ಈ ಪ್ರತಿಮೆ ಇಡಲು ನಿರ್ಧರಿಸಲಾಗಿದೆ. ಈ ಹಿಂದೆ 1968ರಲ್ಲಿ ಈ ಜಾಗದಲ್ಲಿದ್ದ 5ನೇ ಜಾರ್ಜ್​ ಪ್ರತಿಮೆಯನ್ನು ಶಿಫ್ಟ್ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply