ನಾಳೆ ಅಲಿಘರ್​​ಗೆ ಮೋದಿ! ವಿವಿಯಲ್ಲಿ ಜಿನ್ನಾ ಫೋಟೋ…ವಿವಾದ!

masthmagaa.com:

ಪ್ರಧಾನಿ ಮೋದಿ ನಾಳೆ ಅಲಿಘರ್​​​ಗೆ ಭೇಟಿ ನೀಡ್ತಿದ್ದು, ರಾಜಾ ಮಹೇಂದ್ರ ಸಿಂಗ್ ಸ್ಟೇಟ್ ಯುನಿವರ್ಸಿಟಿಗೆ ಶಿಲಾನ್ಯಾಸ ನೆರವೇರಿಸಲಿದ್ಧಾರೆ. ಕಾರ್ಯಕ್ರಮಕ್ಕೆ ಅದ್ಧೂರಿ ಸಿದ್ಧತೆ ನಡೆಸಲಾಗ್ತಿದ್ದು, ಬೃಹತ್ ವೇದಿಕೆ ರೆಡಿಯಾಗಿದೆ. ಒಂದು ಲಕ್ಷ ಜನರು ಕೂರಲು ಆಸನ ವ್ಯವಸ್ಥೆ ಕೂಡ ಮಾಡಲಾಗಿದೆ. 3 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಪೆಂಡಾಲ್ ಹಾಕಲಾಗಿದೆ. ಅಲ್ಲಿನ ಸೆಕ್ಯೂರಿಟಿಯನ್ನು ಎಸ್​​ಪಿಜಿ ಮಾನಿಟರ್ ಮಾಡ್ತಿದೆ. ಇಡೀ ನಗರ ಬ್ಯಾನರ್, ಪೋಸ್ಟರ್​​ಗಳಿಂದ ತುಂಬಿ ತುಳುಕುತ್ತಿದೆ. ಇನ್ನು ಉತ್ತರ ಪ್ರದೇಶ ಗಡಿಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದ್ರ ನಡುವೆ ಪ್ರಧಾನಿ ಮೋದಿ ರೈತರು ಮತ್ತು ಜಾಟ್ ಸಮುದಾಯದ ನಾಯಕರೊಂದಿಗೂ ಮಾತುಕತೆ ನಡೆಸೋ ಸಾಧ್ಯತೆ ಇದೆ. ನಂತರ ಸೆಪ್ಟೆಂಬರ್ 26ರಂದು ಮತ್ತೆ ಪ್ರಧಾನಿ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ ನೀಡ್ತಿದ್ದಾರೆ.

ಪ್ರಧಾನಿ ಮೋದಿ ಅಲಿಘರ್ ಭೇಟಿ ಹೊತ್ತಲ್ಲೇ ಜಿನ್ನಾ ಫೋಟೋ ವಿವಾದ ತಲೆ ಎತ್ತಿದೆ. ಅಲಿಘರ್ ವಿವಿಯಲ್ಲಿ ಮೊಹ್ಮದ್ ಅಲಿ ಜಿನ್ನಾ ಫೋಟೋ ತೆಗೆಯಬೇಕು ಅಂತ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದು ಈ ಫೋಟೋ ತೆಗೆಸುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಗಾಂಧಿಪಾರ್ಕ್ ಬಸ್​ಸ್ಟಾಂಡ್​​ನ ಟಾಯ್ಲೆಟ್​​ನಲ್ಲಿ ಜಿನ್ನಾ ಫೋಟೋ ಅಂಟಿಸಿದ್ರು. ಇದಾದ ಬಳಿಕ ಫೋಟೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಆಡಳಿತ ಹೋಗಿ ಫೋಟೋಗಳನ್ನು ತೆರವುಗೊಳಿಸಿದೆ. ಅಂದಹಾಗೆ ಆಲಿಗರ್ ಮುಸ್ಲಿಂ ಯುನಿವರ್ಸಿಟಿಯಲ್ಲಿ ಜಿನ್ನಾ ಫೋಟೋ ವಿಚಾರ 2018ರಲ್ಲೂ ವಿವಾದಕ್ಕೆ ಕಾರಣವಾಗಿತ್ತು.

-masthmagaa.com

Contact Us for Advertisement

Leave a Reply