ಫ್ರಾನ್ಸ್‌ನಲ್ಲಿ ಶಾಂತಿ ಬೇಕು ಎಂದು ಮನವಿ ಮಾಡಿದ ಮೃತ ಹುಡುಗನ ಅಜ್ಜಿ!

masthmagaa.com:

ಪೊಲೀಸರ ಗುಂಡೇಟಿಗೆ ಬಲಿಯಾದ ಹುಡುಗನ ಸಾವನ್ನ ವಿರೋಧಿಸಿ ಫ್ರಾನ್ಸ್‌ನಲ್ಲಿ ನಡಿತಿರೋ ಹಿಂಸಾಚಾರ ಮುಂದುವರೆದಿದೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಅವ್ರು ದಂಗೆಯನ್ನ ಹತ್ತಿಕ್ಕೋ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತಾಡಿರೋ ಮ್ಯಾಕ್ರಾನ್‌ ಫ್ರಾನ್ಸ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡೋಕೆ ಹಾಗೂ ಶಾಂತಿಯನ್ನ ಮರಳಿ ಸ್ಥಾಪಿಸೋಕೆ ಬೇಕಾದ ಎಲ್ಲಾ ಕ್ರಮಗಳನ್ನ ಕೈಗೊಳ್ಳುವಂತೆ ಅಲ್ಲಿನ ಮಂತ್ರಿಗಳಿಗೆ ತಿಳಿಸಿದ್ದಾರೆ. ಇನ್ನೊಂದ್‌ ಕಡೆ ಫ್ರಾನ್ಸ್‌ನಲ್ಲಿ ನಡಿತಿರೋ ಹಿಂಸಾಚಾರವನ್ನ ನಿಲ್ಲಿಸುವಂತೆ ಪೊಲೀಸರ ಗುಂಡಿನ ದಾಳಿಯಲ್ಲಿ ಮೃತಪಟ್ಟಿರೋ ನಹೇಲ್‌ ಅನ್ನೋ ಹುಡುಗನ ಅಜ್ಜಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಮೊಮ್ಮಗನನ್ನ ಹತ್ಯೆ ಮಾಡಿರೋ ಪೊಲೀಸ್‌ ಅಧಿಕಾರಿ ಮೇಲೆ ಕೋಪವಿದೆ, ಆದ್ರೆ ದಯವಿಟ್ಟು ಬಸ್‌ಗಳು , ಸ್ಕೂಲ್‌ಗಳು ಹಾಗೂ ಕಿಟಕಿಗಳನ್ನ ಒಡೆಯಬೇಡಿ ನಾವು ಶಾಂತಿಯನ್ನ ಬಯಸುತ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply