‘ಗೃಹ ಲಕ್ಷ್ಮಿ’ ಯೋಜನೆಯ ಗೊಂದಲ ಬಗೆಹರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

masthmagaa.com:

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾಗಿರೋ ‘ಗೃಹ ಲಕ್ಷ್ಮಿʼ ಯೋಜನೆ ಕುರಿತಾದ ಗೊಂದಲಗಳ ಸಮಸ್ಯೆ ಮುಂದುವರಿದಿವೆ. ತೆರಿಗೆ ಪಾವತಿಸೋ ಮಕ್ಕಳಿದ್ದರೂ ತಾಯಂದಿರಿಗೆ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ನೀಡಲಾಗುತ್ತೆ ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಯೋಜನೆ ಸೌಲಭ್ಯ ಪಡೆಯಲು ಸರ್ಕಾರ ಹಲವಾರು ನಿರ್ಬಂಧಗಳನ್ನ ವಿಧಿಸಿತ್ತು. ಅದ್ರಲ್ಲಿ ಮುಖ್ಯವಾಗಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ರಿಟರ್ನ್ಸ್ ಅಥವಾ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ ಅವರು ಯೋಜನೆಗೆ ಅರ್ಹರಾಗಿರುವುದಿಲ್ಲ ಅಂತ ತಿಳಿಸಲಾಗಿತ್ತು. ಇದರಿಂದ ಮಕ್ಕಳು ಆದಾಯ ತೆರಿಗೆ ಕಟ್ಟುತ್ತಿದ್ದರೆ ಅವರ ತಾಯಿಗೆ ಸೌಲಭ್ಯ ಸಿಗಲಿದ್ಯಾ ಅನ್ನೊ ಬಗ್ಗೆ ಗೊಂದಲ ಉಂಟಾಗಿತ್ತು. ಹೀಗಾಗಿ ಇದೀಗ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದು, ಮಕ್ಕಳು ತೆರಿಗೆ ಪಾವತಿ ಮಾಡ್ತಿದ್ರೆ ಅದ್ರಿಂದ ತಿಂಗಳಿಗೆ 2 ಸಾವಿರ ರೂಪಾಯಿ ಪಡೆಯೋ ಮಹಿಳೆಯರ ಅರ್ಹತೆ ಮೇಲೆ ಪರಿಣಾಮ ಬೀರಲ್ಲ ಅಂತ ಹೇಳಿದ್ದಾರೆ. ಇತ್ತ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವ್ರು ತಮ್ಮ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳೊಂದಿಗೆ ಯೋಜನೆ ಅನುಷ್ಠಾನ ಕುರಿತು ಜಂಟಿ ಸಭೆ ನಡೆಸಿದ್ದಾರೆ. ಈ ವೇಳೆ ಮಾತಾಡಿರುವ ಬೈರೇಗೌಡ, ಈಗಾಗಲೇ ವಿವಿಧ ಪಿಂಚಣಿ ಪಡಿತಿರೋ ಮಹಿಳೆಯರೂ ‘ಗೃಹ ಲಕ್ಷ್ಮಿ’ ಯೋಜನೆಗೆ ಅರ್ಹರಾಗಿರುತ್ತಾರೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply