ಜಿಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆ: ಮಧು ಬಂಗಾರಪ್ಪ ಶಾಕಿಂಗ್ ಸ್ಟೇಟ್‌ಮೆಂಟ್‌

masthmagaa.com:

BJP ಜೊತೆ ಮೈತ್ರಿ ಆದ್ಮೇಲೆ JDS ನಾಯಕರ ಅಸಮಾಧಾನ ಈಗ ಪಕ್ಷಾಂತರದ ಹಂತ ತಲುಪಿದೆ. JDS ಹಿರಿಯ ನಾಯಕ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ GT ದೇವೇಗೌಡ ಕಾಂಗ್ರೆಸ್‌ ಸೇರ್ತಾರೆ ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಗ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ಅಂದ್ಹಾಗೆ ಮೊನ್ನೆ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ GTD ಪಕ್ಷ ಬಿಡಲ್ಲ ಅಂತ ಪ್ರಮಾಣ ಮಾಡಿದ್ದಾರೆ ಅಂತೇಳಲಾಗ್ತಿತ್ತು. ಈ ಬಗ್ಗೆ ರಿಪ್ಲೈ ಮಾಡಿದ್ದ GTD ಪಕ್ಷ ಬಿಡಲ್ಲ ಅಂತ ಪ್ರಮಾಣ ಮಾಡಿಲ್ಲ. ಪಕ್ಷದ ಸಂಘಟನೆ ಮಾಡೋ ನಿರ್ಧಾರ ಮಾಡಲಾಗಿದೆ ಅಷ್ಟೆ ಅಂತ ಅಡ್ಡಗೋಡೆ ಮೇಲೆ ದೀಪ ಇಡೋ ಹಾಗೆ ಹೇಳಿಕೆ ನೀಡಿದ್ರು. ಈ ಬೆನ್ನಲ್ಲೆ ʻಕೆಲವೇ ದಿನಗಳಲ್ಲಿ GTD ವಾಪಸ್‌ ಕಾಂಗ್ರೆಸ್‌ ಸೇರಲಿದ್ದಾರೆ. ಅವರು ನಮಗೆ ಬಹಳ ಹಳಬರು, ಸ್ವಲ್ಪ ದಿನ ದೂರ ಇದ್ರು ಅಷ್ಟೆ. ಈಗ ಮತ್ತೆ ತಮ್ಮ ಪಕ್ಷಕ್ಕೆ ಬರ್ತಿದ್ದಾರೆ. ನಮ್ಮ ಜೊತೆಗೇ ಇರುವಂತೆ ನೋಡಿಕೊಳ್ತೇವೆ ಅಂತ ಮಧು ಬಂಗಾರಪ್ಪ ಹೇಳಿದ್ದಾರೆ. ಅಂದ್ಹಾಗೆ ಕಳೆದ ವಿಧಾನಸಭೆ ಚುನಾವಣೆ ಟೈಮಲ್ಲೆ GTD ಕಾಂಗ್ರೆಸ್‌ ಸೇರುವತ್ತ ಒಲವು ತೋರಿದ್ರು. ಆದ್ರೆ ಆಗ ಜೆಡಿಎಸ್‌ ವರಿಷ್ಠ HD ದೇವೇಗೌಡ್ರು, GTDರನ್ನ ಸಂತೈಸಿ JDSನಲ್ಲಿ ಉಳಿಸಿಕೊಂಡಿದ್ರು. ಈಗ ಈ ಪಕ್ಷಾಂತರ ಕಿಡಿ ಮತ್ತೆ ಕೆಂಪಗಾಗಿದೆ. GTD ಮತ್ತು ಶಿವಮೊಗ್ಗ ಕ್ಷೇತ್ರದ BJP ಶಾಸಕ ಚೆನ್ನಬಸಪ್ಪ ಕಾಂಗ್ರೆಸ್‌ ಸೇರ್ತಾರೆ ಅಂತ ಮಧು ಬಂಗಾರಪ್ಪ ಹೇಳಿದ್ದಾರೆ. ಅಲ್ಲದೆ JDS ಮಾಜಿ ಶಾಸಕರಾದ ಡಿಸಿ ಗೌರಿಶಂಕರ್‌ ಹಾಗೂ ಮಂಜುನಾಥ್‌ ಈಗಾಗ್ಲೆ ಕಾಂಗ್ರೆಸ್‌ ಸೇರಿದ್ದಾರೆ. ಈ ಬಗ್ಗೆ ರಿಪ್ಲೈ ಮಾಡಿರೊ ಮಾಜಿ ಸಿಎಂ ಕುಮಾರಸ್ವಾಮಿ ʻಅವರಿಗೆ ಅನುಕೂಲ ಆಗೋ ಕಡೆ ಹೋಗ್ಲಿ ಬಿಡ್ರಿ. ನಮ್ಗೇನು ತೊಂದ್ರೆ ಇಲ್ಲʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply