masthmagaa.com:

ಕೊರೋನಾ ಅನ್ನೋ ಈ ವೈರಾಣು ಜನರ ಮುಖದ ಮೇಲೆ ಮಾಸ್ಕ್ ತಂದು ಕೂರಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸೋದು ಈಗ ಕಡ್ಡಾಯವಾಗಿಬಿಟ್ಟಿದೆ. ಆದ್ರೂ ಕೆಲವರು ಮಾಸ್ಕ್ ಹಾಕದೆ ಓಡಾಡ್ತಿರ್ತಾರೆ. ಅಂಥವರಿಗೆ ಪಾಠ ಕಲಿಸಲು ಸರ್ಕಾರ ಮತ್ತು ಪೊಲೀಸರು ನಾನಾ ಕಸರತ್ತು ಮಾಡ್ತಿದ್ದಾರೆ. ದಂಡದ ಮೊತ್ತವನ್ನ ಹೆಚ್ಚಿಸೋದು, ರಸ್ತೆಯಲ್ಲಿ ಕಸ ಗುಡಿಸೋದು, ಇತ್ಯಾದಿ ಇತ್ಯಾದಿ.. ಆದ್ರೆ ಇನ್ಮುಂದೆ ಮಾಸ್ಕ್ ಧರಿಸದಿದ್ದರೆ ಅಂತಹವರನ್ನ ಕೋವಿಡ್​ ಕೇರ್ ಸೆಂಟರ್​ಗಳಲ್ಲಿ ಕಡ್ಡಾಯಚಾಗಿ ಕೆಲಸ ಮಾಡಿಸಬೇಕು ಅಂತ ಗುಜರಾತ್​ ಹೈಕೋರ್ಟ್​ ತೀರ್ಪು ನೀಡಿದೆ. ಈ ಸಂಬಂಧ ಪ್ರಕಟಣೆ ಹೊರಡಿಸುಂತೆ ಗುಜರಾತ್​ ಸರ್ಕಾರಕ್ಕೆ ಸೂಚಿಸಿದೆ. ಸೋ, ಇನ್ಮುಂದೆ ಗುಜರಾತ್​ ಮಾಸ್ಕ್ ಧರಿಸದವರು ಕಂಡರೆ ಅವರನ್ನ ಕರ್ಕೊಂಡ್​ ಹೋಗಿ ಕೊರೋನಾ ಕೇಂದ್ರಗಳಲ್ಲಿ ಕೆಲಸ ಮಾಡಿಸಲಾಗುತ್ತೆ. ಕೇವಲ ಗುಜರಾತ್​ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲೂ ಇಂತಹ ನಿಯಮ ಅಂದ್ರೆ ಅಚ್ಚರಿ ಇಲ್ಲ.

-masthmagaa.com

Contact Us for Advertisement

Leave a Reply