ಮಹಿಳೆಗೆ ಆ್ಯಸಿಡ್ ಕುಡಿಸಿದ ದುಷ್ಟರು! ಯಾಕೆ ಗೊತ್ತಾ?

masthmagaa.com:

ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಅವರ ಪತಿ ಮತ್ತು ಪತಿಯ ಸಹೋದರಿ ಬಲವಂತವಾಗಿ ಆಸಿಡ್ ಕುಡಿಸಿದ್ದಾರೆ. ಜೂನ್ 28ರಂದು ಈ ಘಟನೆ ವರದಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಷ್ಯ ಗೊತ್ತಾದ ಕೂಡಲೇ ಅಕ್ಕಪಕ್ಕದವರು ಸೇರ್ಕೊಂಡು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ 25 ವರ್ಷದ ಆ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ. ಆಕೆಯ ಆಹಾರ ಪೈಪ್ ಮತ್ತು ಕರಳು ಫುಲ್ ಸುಟ್ಟುಹೋಗಿದೆ. ಅನ್ನ ನೀರು ಸೇವಿಸೋ ಸ್ಥಿತಿಯಲ್ಲಿ ಇಲ್ಲ. ನಿರಂತರವಾಗಿ ಬ್ಲಡ್ ವಾಮಿಟ್ ಮಾಡ್ತಿದ್ದಾರೆ. ಸದ್ಯ ಪೊಲೀಸರು ಕೇಸ್ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ. ಎಂಥಾ ವಿಕೃತಿಯ, ಕ್ರೂರ ಮನಸ್ಥಿತಿಯವರು ಇರ್ತಾರೆ ನೋಡಿ.

-masthmagaa.com

Contact Us for Advertisement

Leave a Reply