ಗ್ಯಾನ್‌ವಪಿ ಮಸೀದಿ: ASI ಸಮೀಕ್ಷೆಗೆ ಗ್ರೀನ್‌ ಸಿಗ್ನಲ್‌, ಮಸೀದಿ ಮಂಡಳಿಗೆ ಹಿನ್ನಡೆ

masthmagaa.com:

ವಾರಣಾಸಿಯ ಗ್ಯಾನ್‌ವಪಿ ಮಸೀದಿಯ ASI ಸಮೀಕ್ಷೆಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ವೈಜ್ಞಾನಿಕ ಸಮೀಕ್ಷೆಗೆ ಕೋರ್ಟ್​ ಸಮ್ಮತಿ ನೀಡಿದ್ದು, ನ್ಯಾಯಕ್ಕಾಗಿ ಸಮೀಕ್ಷೆ ಅನಿವಾರ್ಯ ಅಂತ ಹೇಳಿದೆ. ಅಲಹಾಬಾದ್ ಹೈಕೋರ್ಟ್ ಜುಲೈ 27 ರಂದು ಎರಡೂ ಕಡೆಯ ವಿಚಾರಣೆ ನಂತರ ತೀರ್ಪನ್ನ ಕಾಯ್ದಿರಿಸಿತ್ತು. ಇದೀಗ ತೀರ್ಪು ಹೊರಬಂದಿದ್ದು, ಜಿಲ್ಲಾ ನ್ಯಾಯಾಲಯದ ತೀರ್ಪನ್ನ ಎತ್ತಿಹಿಡಿದು ಸಮೀಕ್ಷೆ ನಡೆಸುವಂತೆ ಹೈಕೋರ್ಟ್ ಅನುಮತಿ ನೀಡಿದೆ. ಸರ್ವೆಗೆ ತಡೆ ನೀಡುವಂತೆ ಕೋರಿದ್ದ ಮಸೀದಿ ಮಂಡಳಿ ಅರ್ಜಿಯನ್ನ ಕೋರ್ಟ್ ವಜಾಗೊಳಿಸಿದೆ. ಇದರ ಬೆನ್ನಲ್ಲೇ ಅಲಹಾಬಾ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರೋಕೆ ಮಸೀದಿ ಮಂಡಳಿ ಮುಂದಾಗಿದೆ.

-masthmagaa.com

Contact Us for Advertisement

Leave a Reply