ಭಾರತ-ಪಾಕ್ ವೈಷಮ್ಯಕ್ಕೆ ಮೋದಿಯೇ ಕಾರಣ ಎಂದ ಅಫ್ರೀದಿ

ಪ್ರಧಾನಿ ಮೋದಿ ಅಧಿಕಾರದಲ್ಲಿ ಇರೋವರೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್​ ಸಂಬಂಧ ವೃದ್ಧಿಯಾಗಲ್ಲ ಅಂತ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಶಾಹಿದ್ ಅಫ್ರೀದಿ ಹೇಳಿದ್ದಾರೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದೆ ಅಂತ ಕ್ರಿಕೆಟ್​ ಪಾಕಿಸ್ತಾನಕ್ಕೆ ನೀಡಿದ ಸಂದರ್ಶನದಲ್ಲಿ ಅಫ್ರೀದಿ ಆರೋಪಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೆ ಕ್ರಿಕೆಟ್​ ಆರಂಭಗೊಳ್ಳುತ್ತಾ ಅಂತಾ ಕೇಳಿದ ಪ್ರಶ್ನೆಗೆ, ಮೋದಿ ಅಧಿಕಾರದಲ್ಲಿ ಇರೋವವರೆಗೆ ಅಂತಹ ಸಾಧ್ಯತೆ ತುಂಬಾ ಕಡಿಮೆ ಅಂತ ನನಗೆ ಅನಿಸುತ್ತೆ. ಮೋದಿ ಯೋಚಿಸುವ ರೀತಿಯನ್ನ ಭಾರತೀಯರು ಸೇರಿದಂತೆ ನಾವೆಲ್ಲರೂ ಅರ್ಥ ಮಾಡಿಕೊಂಡಿದ್ದೇವೆ. ಅವರ ಆಲೋಚನೆ ನಕಾರಾತ್ಮಕತೆಯಿಂದ ಕೂಡಿದೆ. ಎರಡು ದೇಶಗಳ ಕ್ರಿಕೆಟ್ ಸಂಬಂಧ ಹಾಳಾಗಿದ್ದು ಒಬ್ಬ ವ್ಯಕ್ತಿಯಿಂದ. ಎರಡೂ ದೇಶದ ಗಡಿ ಭಾಗದ ಜನ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ಬಯಸುತ್ತಾರೆ. ಆದ್ರೆ ಮೋದಿ ಏನು ಮಾಡಲು ಹೊರಟಿದ್ದಾರೆ ಮತ್ತು ಅವರ ಉದ್ದೇಶ ಏನು ಅನ್ನೋದು ನನಗೆ ಅರ್ಥವಾಗ್ತಿಲ್ಲ ಎಂದಿದ್ದಾರೆ. ಅಂದ್ಹಾಗೆ ಭಾರತ ಮತ್ತು ಪಾಕ್ ನಡುವೆ ಕೊನೆಯೆ ದ್ವಿಪಕ್ಷೀಯ ಸರಣಿ ನಡೆದಿದ್ದು 2012-13ರಲ್ಲಿ. ಆಗ 2 ಟಿ-20 ಹಾಗೂ 3 ಏಕದಿನ ಪಂದ್ಯಗಳನ್ನ ಆಡಲು ಪಾಕಿಸ್ತಾನ ತಂಡ ಭಾರತಕ್ಕೆ ಬಂದಿತ್ತು. ಭಾರತ ಕೊನೆಯದಾಗಿ ಪಾಕ್ ಪ್ರವಾಸ ಕೈಗೊಂಡಿದ್ದು 2006ರಲ್ಲಿ. ಆಗ ರಾಹುಲ್ ದ್ರಾವಿಡ್​ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ರು.

Contact Us for Advertisement

Leave a Reply