ಅಮೆರಿಕ, ಕೆನಡಾ ಪ್ರಜೆಗಳ ಅಪಹರಣ! ದುಡ್ಡು ಕೊಡ್ತಿದ್ರೆ ಕಲ್ಲಾಸ್ ಎಂದ ಕಿಡ್ನಾಪರ್!

masthmagaa.com:

ಹೈಟಿಯಲ್ಲಿ ಅಪಹರಣಕ್ಕೆ ಒಳಗಾಗಿರೋ ಅಮೆರಿಕ ಮತ್ತು ಕೆನಡಾದ ಮಿಷನರಿ ಸದಸ್ಯರು ಇನ್ನೂ ಕೂಡ ಪತ್ತೆಯಾಗಿಲ್ಲ. ಇದೀಗ ಇಂಟರ್​ನೆಟ್​​ನಲ್ಲಿ ವಿಡಿಯೋ ಹಾಕಿರೋ ವ್ಯಕ್ತಿಯೊಬ್ಬ, ನಾನು ಅಮೆರಿಕ ಮತ್ತು ಕೆನಡಾದ ಪ್ರಜೆಗಳನ್ನು ಅಪಹರಿಸಿದ ಗ್ಯಾಂಗ್​​ನವನು. ನನಗೆ ಬೇಕಾದ ದುಡ್ಡು ಕೊಡದೇ ಇದ್ರೆ ಅಮೆರಿಕನ್ನರನ್ನು ಕೊಲ್ಲುವ ಬಗ್ಗೆ ಯೋಚಿಸುತ್ತಿದ್ದೀನಿ ಅಂತ ಬೆದರಿಕೆ ಹಾಕಿದ್ದಾನೆ. ನೇರಳೆ ಬಣ್ಣದ ಸೂಟ್ ಧರಿಸಿರೋ ಈ ವ್ಯಕ್ತಿ ಹೈಟಿ ಮೂಲದವನಾಗಿದ್ದು, ಲಾಮೋ ಸಂಜೊವ್ ಅಂತ ಗುರುತಿಸಲಾಗಿದೆ. ಈತ ಆ 17 ಮಂದಿಯನ್ನು ಅರೆಸ್ಟ್ ಮಾಡಿರೋ 400 ಮಾವೋಜೋ ಗ್ಯಾಂಗ್​​ನ ಲೀಡರ್ ಅಂತ ಗೊತ್ತಾಗಿದೆ. ಅಂದಹಾಗೆ ದುಷ್ಕರ್ಮಿಗಳು ಈಗಾಗಲೇ ಒಂದೊಂದು ತಲೆಗೆ 10 ಲಕ್ಷ ಡಾಲರ್​​ನಂತೆ 1.70 ಕೋಟಿ ಡಾಲರ್ ದುಡ್ಡಿಗೆ ಬೇಡಿಕೆ ಇಟ್ಟಿದ್ದಾರೆ. ಅಮೆರಿಕ ಕೂಡ ಅಪಹರಣಕ್ಕೀಡಾದ ಪ್ರಜೆಗಳ ರಕ್ಷಣೆಗೆ ಏನೇನ್ ಮಾಡೋಕೆ ಸಾಧ್ಯವಾಗುತ್ತೋ ಅವೆಲ್ಲವನ್ನು ಮಾಡ್ತೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply