ಒತ್ತೆಯಾಳುಗಳ ರಿಲೀಸ್‌ ವಿಚಾರ ಇಸ್ರೇಲ್‌ಗೆ ಶಾಕ್‌ ನೀಡಿದ ಹಮಾಸ್‌!

masthmagaa.com:

ಗಾಜಾ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿರೋ ಹಮಾಸ್‌ ಇದೀಗ, ಇಸ್ರೇಲ್‌ ಒತ್ತೆಯಾಳುಗಳನ್ನ ಹಂತ ಹಂತವಾಗಿ ರಿಲೀಸ್‌ ಮಾಡೋ ಬಗ್ಗೆ ಹೇಳ್ಕೊಂಡಿದೆ. ಮೂರು ಹಂತಗಳ ಈ ಹೊಸ ಕದನವಿರಾಮದ ಡೀಲ್‌ ಪ್ರಕಾರ, ಇಸ್ರೇಲ್‌ 30 ಪ್ಯಾಲೆಸ್ತೀನ್‌ ಒತ್ತೆಯಾಳುಗಳನ್ನ ರಿಲೀಸ್‌ ಮಾಡಿದ್ರೆ, ಹಮಾಸ್‌ 33 ಇಸ್ರೇಲ್‌ ಒತ್ತೆಯಾಳುಗಳನ್ನ ರಿಲೀಸ್‌ ಮಾಡ್ತೀವಿ ಅಂತೇಳಿದೆ. ಆಘಾತಕಾರಿ ಅಂಶ ಅಂದ್ರೆ ಈ ಒತ್ತೆಯಾಳುಗಳು ಬದುಕಿರಲುಬಹುದು ಅಥ್ವಾ ಮೃತಪಟ್ಟಿರಲುಬಹುದು ಅಂತ ಹಮಾಸ್‌ ಇಸ್ರೇಲ್‌ಗೆ ಶಾಕ್‌ ಕೊಟ್ಟಿದೆ. ಆದ್ರೆ ಇಸ್ರೇಲ್‌ ಈ ಬಗ್ಗೆ ಏನನ್ನೂ ಹೇಳಿಲ್ಲ.

-masthmagaa.com

Contact Us for Advertisement

Leave a Reply