ರಿಲೀಸ್‌ ಗೆ ರೆಡಿಯಾದ “ಹನುಮಾನ್‌”!

masthmagaa.com:

“ಹನುಮಾನ್” ಚಿತ್ರ ರಿಲೀಸ್‌ಗೆ ರೆಡಿಯಾಗಿ ನಿಂತಿದೆ. ಚಿತ್ರದ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಆಗಿದೆ. ಈ ಚಿತ್ರ 2024ರ ಜನವರಿ 12ರಂದು ರಿಲೀಸ್ ಆಗಲಿದೆ. ಹನುಮಾನ್’ ಸಿನಿಮಾದ ಟೀಸರ್ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರ ಈ ವರ್ಷ ಮೇ ತಿಂಗಳಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ವಿಎಫ್​ಎಕ್ಸ್ ಕೆಲಸಗಳು ಬಾಕಿ ಇದ್ದಿದ್ದರಿಂದ ಸಿನಿಮಾದ ರಿಲೀಸ್ ವಿಳಂಬ ಆಯಿತು. ಈಗ ಸಿನಿಮಾ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜನವರಿ 12ರಂದು ಸಿನಿಮಾ ತೆರೆಗೆ ತರುವುದಾಗಿ ತಂಡ ತಿಳಿಸಿದೆ. ಇದು ಸಂಪೂರ್ಣವಾಗಿ ಪೌರಾಣಿಕ ಕಥೆಯನ್ನು ಹೊಂದಿರುವ ಚಿತ್ರ ಅಲ್ಲ. ಹನುಮಂತನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಬೇರೆಯದೇ ಕಥೆ ಹೇಳಲಾಗ್ತಾ ಇದೆ ಅಂತ ಚಿತ್ರತಂಡ ಹೇಳಿದೆ.

ಪ್ರಶಾಂತ್​ ವರ್ಮಾ ಅವರ ನಿರ್ದೇಶನ ಇರುವ ‘ಹನುಮಾನ್​’ ಚಿತ್ರಕ್ಕೆ, ತೇಜ ಸಜ್ಜಾ ಹೀರೋ ಆಗಿ, ವರಲಕ್ಷ್ಮಿ ಶರತ್​ಕುಮಾರ್​, ವಿನಯ್ ರೈ, ಅಮೃತಾ ಅಯ್ಯರ್​, ವೆನ್ನೆಲಾ ಕಿಶೋರ್​, ರಾಜ್​ ದೀಪಕ್​ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.

-masthmagaa.com

Contact Us for Advertisement

Leave a Reply