ಚೀನಾ ಗಡಿಯಲ್ಲಿ ಏರ್‌ಪೋರ್ಸ್‌ ಭರ್ಜರಿ ತಯಾರಿ: 20 ಬೇಸ್‌ಗಳ ಅಭಿವೃದ್ಧಿ

masthmagaa.com:

ನೆರೆಯ ಚೀನಾ ಪುಂಡಾಟಕ್ಕೆ ಕೌಂಟರ್‌ ಕೊಡೋಕೆ ಭಾರತದ ವಾಯುಸೇನೆ ಕಳೆದ 4 ವರ್ಷಗಳಿಂದ ಸದ್ದು ಮಾಡದೆ ತನ್ನ ಬೇಸ್‌ಗಳನ್ನ ಇಂಪ್ರೂ ಮಾಡ್ತಿದೆ ಅನ್ನೋ ವಿಚಾರ ಈಗ ಬೆಳಕಿಗೆ ಬಂದಿದೆ.. ಭರ್ಜರಿಯಾಗಿ ತನ್ನ ಶಕ್ತಿ ಜಾಸ್ತಿ ಮಾಡ್ಕೊಳ್ತಿರೋ IAF ಬರೋಬ್ಬರಿ 20 ಏರ್‌ಬೇಸ್‌ನ ಇನ್‌ಫ್ರಾ ಅಭಿವೃದ್ಧಿ ಮಾಡಿದೆ ಅಂತ ತಿಳಿದುಬಂದಿದೆ. ಕೇವಲ ಇನ್‌ಫ್ರಾ ಅಲ್ಲದೆ, ಹೊಸ ಅಂಡರ್‌ಗ್ರೌಂಡ್‌ ಶಸ್ತ್ರಾಗಾರಗಳು, ಯುದ್ಧವಿಮಾನಗಳ ಶೆಲ್ಟರ್‌ಗಳನ್ನ ಭದ್ರಪಡಿಸೋದು, ಟ್ಯಾಕ್ಸಿವೇಗಳ ಅಭಿವೃದ್ಧಿ.. ವಿಮಾನ ಹಾರಾಟಕ್ಕೆ ಬೇಕಾದ ಉಪಕರಣಗಳನ್ನ ಅಪ್‌ ಗ್ರೇಡ್‌ ಮಾಡೋದು, ಹೊಸ ರೆಡಾರ್‌ ಸಿಸ್ಟಮ್‌ಗಳು ಹಾಗೂ ಬೇಸ್‌ ಡಿಫೆನ್ಸ್‌ ಸಿಸ್ಟಮ್‌ಗಳನ್ನ ನಿಯೋಜಿಸಿಕೊಂಡಿದೆ ಅಂತ ಗೊತ್ತಾಗಿದೆ. ಈ ಬಗ್ಗೆ ಮಾತಾಡಿರೋ ಅಧಿಕಾರಿಯೊಬ್ರು. ಈ ರೀತಿಯ ಅಭಿವೃದ್ಧಿ ಯೋಜನೆಗಳನ್ನ ಜಾರಿಗೆ ತರೋ ಯೋಜನೆ ಮೊದಲೇ ಇತ್ತು. ಆದ್ರೆ 2020ರ ನಂತರ ಚೀನಾದೊಂದಿಗಿನ ಸಂಘರ್ಷದ ನಂತರ ಈ ಕೆಲಸಗಳು ವೇಗ ಪಡ್ಕೊಂಡ್ವು. ಅದೇ ಟೈಮಲ್ಲಿ ರಕ್ಷಣಾ ಸಚಿವಾಲಯ ಟಾಟಾ ಪವರ್‌ SED ಜೊತೆ 12,000 ಕೋಟಿ ಒಪ್ಪಂದ ಮಾಡ್ಕೊಳ್ತು. ಆ ಮೂಲಕ ಆರ್ಮಿ, ನೇವಿ, ಏರ್‌ಫೋರ್ಸ್‌ಗಳ 37 ಏರ್‌ಫೀಲ್ಡ್‌ಗಳ ಇನ್‌ಫ್ರಾದ ಆಧುನೀಕರಣ ಮಾಡಲಾಗಿದೆ. ಇವುಗಳಲ್ಲಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ಗೆ ಸಂಬಂಧಿಸಿದ Cat-2 ಇನ್‌ಸ್ಟ್ರುಮೆಂಟ್‌ ಲ್ಯಾಂಡಿಂಗ್‌ ಸಿಸ್ಟಮ್‌, Cat-2 ಏರ್‌ಫೀಲ್ಡ್‌ ಲೈಟ್ನಿಂಗ್‌ ಸಿಸ್ಟಮ್‌ಗಳನ್ನ ಅಳವಡಿಸಲಾಗಿದೆ ಅಂತ ಹೇಳಿದ್ದಾರೆ. ಇನ್ನು ಅಂಡರ್‌ಗ್ರೌಂಡ್‌ ಶಸ್ತ್ರಾಗಾರಗಳನ್ನ ಏರ್‌ಫೋರ್ಸ್‌ ಜೊತೆಗೆ ಆರ್ಮಿ ಕೂಡ ಮಾಡ್ತಾ ಇದೆ. ಅದ್ರಲ್ಲೂ ಈಸ್ಟರ್ನ್‌ ಸೆಕ್ಟರ್‌ನಲ್ಲಿ ಅಂದ್ರೆ ಅರುಣಾಚಲ ಪ್ರದೇಶ, ಸಿಕ್ಕಿಂಗಡಿಗಳಲ್ಲಿ ಈ ಫೆಸಿಲಿಟಿಗಳನ್ನ ಅಭಿವೃದ್ಧಿ ಮಾಡಲಾಗಿದೆ ಅಂದಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ ಸ್ಯಾಟಲೈಟ್‌ ಇಮೇಜರಿ ಎಕ್ಸ್‌ಪರ್ಟ್‌ ಒಬ್ರು ತೆಗೆದಿರೋ ಅಸ್ಸಾಂನ ಚಾಬುವಾ ಏರ್‌ಬೇಸ್‌ನ ಸ್ಯಾಟಲೈಟ್ ಚಿತ್ರಗಳು ವೈರಲ್ಲಾಗಿವೆ. ಇದ್ರಲ್ಲಿ ಫೈಟರ್‌ ಜೆಟ್‌ಗಳನ್ನ ನಿಲ್ಲಿಸೋ ಹಾಗೂ ಮೇಂಟೇನ್‌ ಮಾಡೋ ಏಪ್ರಾನ್‌ಗಳ ಅಭಿವೃದ್ಧಿಯಾಗಿರೋದು ಕಾಣ್ತಿದೆ. ಚಾಬುವಾ ಏರ್‌ಬೇಸ್‌ನಲ್ಲಿ Su-30 MKI ಜೆಟ್‌ಗಳು ನಿಯೋಜನೆಗೊಂಡಿವೆ. ಉಳಿದಂತೆ ಆರ್ಮಿಯ ಇಂಟಿಗ್ರೇಟೆಡ್‌ ಏವಿಯೇಶನ್‌ ಬ್ರಿಗೇಡ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಡ್ರೋನ್‌ ಹಾಗೂ ಹೆಲಿಕಾಪ್ಟರ್‌ಗಳನ್ನ ನಿಯೋಜಿಸಲಾಗಿದೆ. ಹೆಚ್ಚಿನ ಆಯುಧಗಳನ್ನ ಇಡೋಕೆ ಹೆಚ್ಚಿನ ಇನ್‌ಫ್ರಾ ಮೇಲೆ ಗಮನ ಹರಿಸಲಾಗಿದೆ. ಒಟ್ಟಾರೆಯಾಗಿ LACಯಲ್ಲಿ ಅಂದ್ರೆ ಇಂಡೋ ಚೀನಾ ಬಾರ್ಡರ್‌ನಲ್ಲಿ ಏರ್‌ಫೋರ್ಸ್‌ ಕಾರ್ಯ ಸನ್ನದವಾಗಿದೆ ಅಂತ ಈ ರಿಪೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply