ಹಾರ್ದಿಕ್‌ ಪಾಂಡ್ಯ ಗಾಯ: IPL, ಅಫ್ಘಾನ್‌ ಸಿರೀಸ್‌ಗೂ ಅಲಭ್ಯ !

masthmagaa.com:

2023ರ ವಿಶ್ವಕಪ್‌ನಲ್ಲಿ ಪಾದದ ಗಾಯಕ್ಕೆ ತುತ್ತಾಗಿದ್ದ ಭಾರತದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಾ, ಇದೀಗ ಜನವರಿಯಲ್ಲಿ ನಡೆಯೋ ಅಫ್ಘಾನ್ ವಿರುದ್ದದ ಟಿ-20 ಸಿರೀಸ್‌ನಿಂದಲೂ ಹೊರಗುಳಿಯಲಿದ್ದಾರೆ ಅಂತ ಹೇಳಲಾಗ್ತಿದೆ. ವಿಶ್ವಕಪ್‌ ಬಳಿಕ ಆಸೀಸ್‌, ಸೌತ್‌ ಆಫ್ರಿಕಾ ವಿರುದ್ದದ ಸರಣಿಯಿಂದ ಹೊರಗುಳಿದಿರೋ ಪಾಂಡ್ಯ ಸುಧೀರ್ಘ ಗಾಯದ ಸಮಸ್ಯೆ ಟೀಂ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. IPLನಲ್ಲಿ ಮುಂಬೈ ಇಂಡಿಯನ್ಸ್‌ಗೆ ನೂತನ ನಾಯಕನಾಗಿರೋ ಹಾರ್ದಿಕ್‌ರ ಈ ಪರಿಸ್ಥಿತಿ IPL ಮೇಲೂ ಪ್ರಭಾವ ಬೀರಬಹುದು ಅಂತೇಳಲಾಗ್ತಿದೆ. ಇತ್ತ ಸೂರ್ಯ ಕುಮಾರ್‌ ಯಾದವ್‌ ಕೂಡ ದ.ಆಫ್ರಿಕಾ ಸೀರಿಸ್‌ನಲ್ಲಿ ಗಾಯಕ್ಕೆ ತುತ್ತಾಗಿ ಅಫ್ಘಾನ್‌ ಸಿರೀಸ್‌ಗೆ ಅಲಭ್ಯರಾಗಿದ್ದಾರೆ. ಅಂದ್ಹಾಗೆ ಅಫ್ಘಾನ್‌ ವಿರುದ್ದ ಜನೆವರಿ 11 ರಿಂದ 3 ಪಂದ್ಯಗಳ ಟಿ-20 ಸೀರಿಸ್‌ ಆರಂಭವಾಗಲಿದೆ. ಜೂನ್‌ನಲ್ಲಿ ನಡೆಯೋ ಟಿ-20 ವಿಶ್ವಕಪ್‌ಗೂ ಮುನ್ನ ಭಾರತ ಆಡೋ ಕೊನೆ ಸಿರೀಸ್‌ ಇದಾಗಿದೆ.

-masthmagaa.com

Contact Us for Advertisement

Leave a Reply