ಮದುವೆಯಾಗಿ 2 ತಿಂಗಳಿಗೇ ಗುಡ್‌ನ್ಯೂಸ್‌ ಕೊಡ್ತೀನಿ ಎಂದ “ಹರಿಪ್ರಿಯಾ”!

masthmagaa.com:

ಸಿಂಹಪ್ರಿಯ ಅಂತಾನೇ ಪೇಮಸ್‌ ಆಗಿರುವ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ.ಇವರಿಬ್ಬರ ಜೋಡಿ ಜನವರಿ 26ಕ್ಕೆ ಮದುವೆಯಾಗಿತ್ತು, ಇನ್ನೂ ಮದುವೆಯಾಗಿ 2 ತಿಂಗಳು ಕಳೆದಿಲ್ಲ, ಗುಡ್‌ ನ್ಯೂಸ್‌ ಕೊಡೊದಕ್ಕೆ ನಟಿ ಹರಿಪ್ರಿಯಾ ಮುಂದಾಗಿದ್ದಾರೆ. ಈ ವಿಷಯವನ್ನ ಸ್ವತಃ ಹರಿಪ್ರಿಯಾ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. “ಒಂದು ಗುಡ್‌ ನ್ಯೂಸ್‌ ಇದೆ, ಏನಂತ ನೀವೇ ಗೆಸ್‌ ಮಾಡಿ” ಅನ್ನೋ ಪೋಸ್ಟ್‌ ಮೂಲಕ ಹರಿಪ್ರಿಯಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಮದ್ವೆ ಆಗಿ 2 ತಿಂಗಳು ಕಳೆದಿದೆ. ಎರಡೂವರೆ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಜೋಡಿ ತಮ್ಮಿಬ್ಬರ ಸಂಬಂಧವನ್ನ ಬಹಳ ಗೌಪ್ಯವಾಗಿ ಕಾಪಾಡಿಕೊಂಡಿದ್ರು,ಮದುವೆಗೆ ಸ್ವಲ್ಪ ದಿನಗಳ ಹಿಂದೆ ತಮ್ಮ ಸಂಬಂಧವನ್ನ ಬಹಿರಂಗಗೊಳಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ರು. ಅಭಿಮಾನಿಗಳು ಇವರ ಜೋಡಿಗೆ ಪ್ರೀತಿಯಿಂದ ಸಿಂಹಪ್ರಿಯ ಅಂತ ನಾಮಕರಣ ಮಾಡಿದ್ರು. ಅಭಿಮಾನಿಗಳು ಇಟ್ಟಿರುವ ಹೆಸರು ಇದು ಎನ್ನುವ ಎಮೋಷನ್‌ಗೆ ಮದುವೆ ಕಾರ್ಡ್‌ಗೂ ಸಹ ಸಿಂಹಪ್ರಿಯ ಅಂತ ಹಾಕಿದ್ರು. ಸದ್ಯಕ್ಕೆ ಹರಿಪ್ರಿಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್‌ನ್ನು ಶೇರ್‌ ಮಾಡಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ “ಹೆಸರೇನು ಮೇಡಮ್, ಯಾವಾಗ ಅನೌನ್ಸ್ ಮಾಡ್ತೀರಾ, ಕೇಳಿದ್ದು ನಿಜಾನಾ, ಗುಡ್ ನ್ಯೂಸ್ ಎಂಬ ಮೆಸೇಜ್ ಇರುವ ಸ್ಕ್ರಿನ್ ಶಾಟ್‌ನ ನಟಿ ಹರಿಪ್ರಿಯಾ ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ ಕೆಳಗೆ “ನನಗೆ ಗೊತ್ತು ನೀವೆಲ್ಲರೂ ಬಹುಶಃ ಇದೇನು ಅಂತ ತಿಳಿಯುವ ಕುತೂಹಲ ಹೊಂದಿರುತ್ತೀರಿ. ಅನೌನ್ಸ್ ಮಾಡುವ ಮೊದಲು ಒಂದು ಊಹೆ ಮಾಡಿ” ಎಂದು ನಟಿ ಹರಿಪ್ರಿಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳೆಲ್ಲ ಒಂದೊಂದು ರೀತಿಯ ಕಾಮೆಂಟ್ಗಳನ್ನ ಮಾಡ್ತಾ ಇದಾರೆ, ಯ್ಯೂಟ್ಯೂಬ್‌ ಚಾನೆಲ್‌ ಮಾಡ್ತೀರಾ ?, ವಸಿಷ್ಠ ಮತ್ತೆ ನೀವು ಒಟ್ಟಿಗೆ ನಟಿಸ್ತಾ ಇದೀರಾ ? ಇನ್ನೊಬ್ರಂತೂ ಪಕ್ಕಾ ಪ್ರಗ್ನೆಂಟ್‌ ಅಂತೆಲ್ಲಾ ಹೇಳ್ತಾ ಇದಾರೆ. ಆದರೆ ಸದ್ಯ ನಟಿ ಇದ್ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಅವರ ಉತ್ತರ ಬರೋ ತನಕ ಗುಡ್‌ ನ್ಯೂಸ್‌ ಏನು ಅಂತ ಫ್ಯಾನ್ಸ್‌ ಕಾಯಲೇ ಬೇಕಾಗಿದೆ.

-masthmagaa.com

Contact Us for Advertisement

Leave a Reply