1 ರೂಪಾಯಿ ಕೊಟ್ಟು ಸುಷ್ಮಾ ಕೊನೆಯಾಸೆ ಈಡೇರಿಸಿದ ಮಗಳು

ದಿವಂಗತ ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯನ್ನು ಅವರ ಪುತ್ರಿ ಬಾನ್ಸುರಿ ಈಡೇರಿಸಿದ್ದಾರೆ. ಪಾಕ್‍ನಲ್ಲಿ ಬಂಧಿತನಾಗಿರುವ ಕುಲಭೂಷಣ್ ಜಾಧವ್ ಕೇಸ್‍ನಲ್ಲಿ ವಾದಿಸಿದ್ದಕ್ಕಾಗಿ 1 ರೂಪಾಯಿ ಮಾತ್ರ ಸಂಭಾವನೆ ಪಡೆಯೋದಾಗಿ ಹರೀಶ್ ಸಾಳ್ವೆ ಹೇಳಿದ್ದರು. ಹೀಗಾಗಿ ಸುಷ್ಮಾ ಸ್ವರಾಜ್ ಕೊನೆಯುಸಿರೆಳೆಯುವ 1 ಗಂಟೆ ಮುನ್ನ ಕರೆಮಾಡಿ 1 ರೂಪಾಯಿ ಸಂಭಾವನೆ ಪಡೆಯುವಂತೆ ಮನವಿ ಮಾಡಿದ್ದರು ಎಂದು ಹರೀಶ್ ಸಾಳ್ವೆ ತಿಳಿಸಿದ್ದರು. ಇದೀಗ ಸುಷ್ಮಾ ಅವರ ಪುತ್ರಿ ಬಾನ್ಸುರಿ, ಹರೀಶ್ ಸಾಳ್ವೆಗೆ 1 ರೂಪಾಯಿ ಸಂಭಾವನೆ ನೀಡಿ ತಾಯಿಯ ಆಸೆ ಈಡೇರಿಸಿದ್ದಾರೆ. ಈ ಬಗ್ಗೆ ಸುಷ್ಮಾ ಸ್ವರಾಜ್ ಪತಿ, ಮಿಜೋರಾಂನ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.

https://twitter.com/governorswaraj/status/1177605870378602501

Contact Us for Advertisement

Leave a Reply