ಬಿಜೆಪಿ ನಾಯಕಿ ಸೋನಾಲಿ ಪೋಗಟ್​​ಗೆ ಕೊಲೆ ಬೆದರಿಕೆ..!

ಹರಿಯಾಣ: ಆದಂಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಸೋನಾಲಿ ಪೋಗಟ್​ಗೆ ಈಗ ಜೀವ ಬೆದರಿಕೆ ಕರೆ ಬಂದಿದೆ. ಪ್ರಕರಣ ಸಂಬಂಧ ಸೋನಾಲಿ ಪೋಗಟ್​​ ತನ್ನ ಸಹೋದರಿ ಮತ್ತು ಭಾವನ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ತನ್ನ ಮೇಲೆ ಹಲ್ಲೆ ನಡೆಸಿದ ಮತ್ತು ಜೀವ ಬೆದರಿಕೆಯೊಡ್ಡಿದ ಆರೋಪ ಹೊರಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೊತೆಗೆ ತನಿಖೆ ಬಳಿಕ ಆರೋಪಿಗಳನ್ನು ಅರೆಸ್ಟ್​ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 28ರಂದು  ಫತೇಹಾಬಾದ್​​​ನಲ್ಲಿ ಹಲ್ಲೆ ನಡೆದಿದೆ ಎಂದು ಸೋನಾಲಿಪೋಗಟ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ವಿಧಾನಸಭೆಯಲ್ಲಿ ಆದಂಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದಿದ್ದ ಸೋನಾಲಿ ಪೋಗಟ್​​ರನ್ನು ಕಾಂಗ್ರೆಸ್​​ನ ಕುಲದೀಪ್​ ಬಿಷ್ಣೋಯಿ ಸೋಲಿಸಿದ್ದರು.

Contact Us for Advertisement

Leave a Reply