ಹಾಸನಾಂಬೆ ಬಾಗಿಲು ಓಪನ್..ಅ.29ರೊಳಗೆ ಹೋಗಿ ದರ್ಶನ ಪಡೆಯಿರಿ…

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯ ಬಾಗಿಲು ತೆರೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಶಾಸಕ ಪ್ರೀತಂಗೌಡ ಸೇರಿದಂತೆ ಹಲವು ಭೇಟಿ ನೀಡಿ ದರ್ಶನ ಪಡೆದರು. ಇಂದು ಮಧ್ಯಾಹ್ನ 12.30 ಕ್ಕೆ ತೆರೆಯಲಾಗಿದ್ದು, ಆಗಸ್ಟ್​ 29ರವರೆಗೆ ದೇವಾಲಯದ ಬಾಗಿಲು ತೆರೆದೇ ಇರಲಿದೆ.  ಈ ಸಮಯದಲ್ಲಿ ಭಕ್ತರು ಭೇಟಿ ನೀಡಿ ಹಾಸನಾಂಬೆ ದರ್ಶನ ಪಡೆಯಬಹುದು. ಆದರೆ ಗರ್ಭಗುಡಿ ತೆರೆದ ದಿನ ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ದರ್ಶನ ಭಾಗ್ಯ ನೀಡುವುದಿಲ್ಲ.

ಈ ದೇವಸ್ಥಾನದಲ್ಲಿ ಕಳೆದ ವರ್ಷ ಬಾಗಿಲು ಹಾಕುವಾಗ ಹಚ್ಚಿದ ದೀಪ ಆರೋದಿಲ್ಲ, ಹೂವು ಬಾಡುವುದಿಲ್ಲ. ಹಾಗೂ ನೈವೇದ್ಯಕ್ಕೆ ಇಟ್ಟ ಅಕ್ಕಿ ಅನ್ನವಾಗಿರುತ್ತೆ ಅನ್ನೋದು ಭಕ್ತರ ನಂಬಿಕೆ.

ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಮಾಧುಸ್ವಾಮಿ, ನಾನು ಸಚಿವನಾಗಿ ಇಲ್ಲಿಗೆ ಬಂದಿಲ್ಲ. ಸಾಮಾನ್ಯ ಭಕ್ತನಾಗಿ ಬಂದು ದೇವಿ ದರ್ಶನ ಪಡೆದಿದ್ದೇನೆ ಅಷ್ಟೆ. ದೇವಿಯ ಗುಡಿಯಲ್ಲಿ ದೀಪ ಉರಿಯುತ್ತಿದ್ದುದನ್ನು ಕಂಡು ಪುಳಕಿತನಾದೆ ಅಂತ ಹೇಳಿದ್ರು.

 

Contact Us for Advertisement

Leave a Reply