ಕೊರೋನಾ ರೋಗಿಗಳಿಗೆ ನೀಡೋ ಔಷಧ ಪಟ್ಟಿ ಬದಲಾವಣೆ!

masthmagaa.com:

ಕೇಂದ್ರ ಆರೋಗ್ಯ ಇಲಾಖೆಯ ಆರೋಗ್ಯ ಸೇವಾ ಮಹಾನಿರ್ದೇಶನಾಲಯ ಅಂದ್ರೆ ಡಿಜಿಹೆಚ್​ಎಸ್​​​​​​​​ ಲಕ್ಷಣರಹಿತ ಮತ್ತು ಮೈಲ್ಡ್​​​ ಲಕ್ಷಣಗಳಿರೋರಿಗೆ ಔಷಧ ನೀಡೋ ತನ್ನ ಗೈಡ್​​ಲೈನ್ಸ್​​ನಲ್ಲಿ ಬದಲಾವಣೆ ಮಾಡಿದೆ. ಯಾವೆಲ್ಲಾ ಔಷಧ ನೀಡಬಹುದು ಅನ್ನೋ ಹೊಸ ಪಟ್ಟಿಯಲ್ಲಿ ಈವರೆಗೆ ಬಳಸಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್​​, ಐವರ್​​ಮೆಕ್ಟಿನ್​, ಡಾಕ್ಸಿಸೈಕ್ಲಿನ್, ಜಿಂಕ್, ಮಲ್ಟಿವಿಟಮಿನ್ ಸೇರಿದಂತೆ ಹಲವು ಔಷಧಗಳನ್ನು ತೆಗೆದುಹಾಕಿದೆ. ಬದಲಾಗಿ ಜ್ವರ ಬಂದ್ರೆ ಕೇವಲ ಜ್ವರ ಕಡಿಮೆ ಮಾಡೋ ಆಂಟಿಪೈರೆಟಿಕ್​​​​ ಮತ್ತು ಶೀತ ಆದ್ರೆ ಆಂಟಿಟಸ್ಸಿವ್​​ ಔಷಧ ನೀಡುವಂತೆ ಸೂಚಿಸಿದೆ. ಜೊತೆಗೆ ಸಿಟಿ ಸ್ಕ್ಯಾನ್ ಕೂಡ ತುಂಬಾ ಅಗತ್ಯ ಬಿದ್ರೆ ಮಾತ್ರ ಮಾಡಿ.. ಸುಮ್ ಸುಮ್ನೆ ಸಿಟಿ ಸ್ಕ್ಯಾನ್ ಮಾಡಿಸಬೇಡಿ ಅಂತಲೂ ತಿಳಿಸಿದೆ.

-masthmagaa.com

Contact Us for Advertisement

Leave a Reply