ರಾಜ್ಯದಲ್ಲಿ ಹೀಟ್‌ ವೇವ್‌ ಕಂಟಿನ್ಯೂ: 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್!

masthmagaa.com:

ರಾಜ್ಯದಲ್ಲಿನ ತಾಪಮಾನ 46 ಡಿಗ್ರಿ ಸೆಲ್ಸಿಯಸ್ ದಾಟೊ ಸಾಧ್ಯತೆ‌ ಇದೆ ಅಂತೇಳಿ ರಾಜ್ಯದ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) 6 ಜಿಲ್ಲೆಗಳಿಗೆ ಮೇ 1ರಿಂದ ಮೇ 9ರವೆಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಬೆಳಗಾವಿ, ಹಾವೇರಿ , ಬಾಗಲಕೋಟೆ, ಕೊಪ್ಪಳ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ 46 ಡಿಗ್ರಿಗೂ ಮೀರಿ ತಾಪಮಾನ ಹೆಚ್ಚಾಗಲಿದೆ ಅಂತ ಈ KSNDMC ತಿಳಿಸಿದೆ. ಅಲ್ದೇ ಕಳೆದ 7 ವರ್ಷಗಳಲ್ಲಿ ಅಂದ್ರೆ 2017ರಿಂದ 2024ರವರೆಗಿನ ಅವಧಿಯಲ್ಲಿ ಏಪ್ರಿಲ್ 30‌ರಂದು ಗರಿಷ್ಠ ಅಂದ್ರೆ 45.6 ಡಿಗ್ರಿ ತಾಪಮಾನ ರಾಜ್ಯದಲ್ಲಿ ದಾಖಲಾಗಿದೆ ಅಂತ ಈ ಸೆಂಟರ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply