ಹೀರೋ ಗ್ರೂಪ್‌ ಅಧ್ಯಕ್ಷನ 24 ಕೋಟಿ ರೂಪಾಯಿ ಮೌಲ್ಯದ ಆಸ್ತಿ ED ವಶ! ಯಾಕೆ?

masthmagaa.com:

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಹೀರೋ ಗ್ರೂಪ್‌ ಅಧ್ಯಕ್ಷ ಪವನ್‌ ಕಾಂತ್‌ ಮುಂಜಾಲ್‌ ಅವ್ರ ಅಸ್ತಿಯನ್ನ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದುಕೊಂಡಿದೆ. ದೆಹಲಿಯ 3 ಕಡೆಯಲ್ಲಿರೋ ಸುಮಾರು 24.95 ಕೋಟಿ ರೂಪಾಯಿ ಬೆಲೆಬಾಳೋ ಅಸ್ತಿಯನ್ನ ತನಿಖಾ ಸಂಸ್ಥೆ ಸೀಜ್‌ ಮಾಡಿದೆ. ಮುಂಜಾಲ್‌ ಅವ್ರು ಸುಮಾರು 54 ಕೋಟಿ ರೂಪಾಯಿ ವಿದೇಶಿ ಹಣವನ್ನ ಅಕ್ರಮವಾಗಿ ಭಾರತದ ಹೊರಗೆ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ಬೇರೆಯವ್ರ ಹೆಸರನ್ನ ಬಳಸಿಕೊಂಡು ವಿದೇಶಿ ಹಣ ಪಡೆದುಕೊಂಡಿದ್ದಾರೆ. ನಂತರ ಅದನ್ನ ವಿದೇಶದಲ್ಲಿ ತಮ್ಮ ಪರ್ಸನಲ್‌ ಖರ್ಚಿಗೆ ಬಳಸಿಕೊಂಡಿದ್ದಾರೆ ಅಂತ ಕಂದಾಯ ಗುಪ್ತಚರ ನಿರ್ದೇಶನಾಲಯ ಆರೋಪ ಮಾಡಿದೆ. ಈ ಆರೋಪದ ಮೇಲೆ ಇಡಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ.

-masthmagaa.com

Contact Us for Advertisement

Leave a Reply