ಜ್ಞಾನವಾಪಿ ಮಸೀದಿ ಕೇಸ್‌: ASI ನಿಂದ ಹೈಕೋರ್ಟ್‌ಗೆ ವರದಿ ಸಲ್ಲಿಕೆ!

masthmagaa.com:

ವಾರಣಾಸಿ ಜಿಲ್ಲಾ ಕೋರ್ಟ್ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಸರ್ವೆ ಇಲಾಖೆ (ASI) ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನ ಸಲ್ಲಿಸಿದೆ. ಸೋಮವಾರ ASI(Archaeological Survey of India) ಸೀಲ್ಡ್‌ ಕವರ್‌ನಲ್ಲಿ ವರದಿ ಸಲ್ಲಿಸಿದಕ್ಕೆ ಹಿಂದೂಗಳ ಪರ ವಕೀಲ ವಿಷ್ಣು ಶಂಕರ್‌ ಜೈನ್ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ರಿಪೋರ್ಟ್‌ ಪಬ್ಲಿಕ್‌ ಡೊಮೈನ್‌ನಲ್ಲಿರಬೇಕೆಂದು ಹೇಳಿದ್ದಾರೆ.ಅಂದ್ಹಾಗೆ ಈ ಹಿಂದೆ ಡಿಸೆಂಬರ್‌ 11 ರಂದು ಜ್ಞಾನವಾಪಿ ಮಸೀದಿ ಹಿಂದೂ ದೇವಾಲಯದ ಮೇಲೆ ನಿಂತಿದೆಯೆ ಎಂಬ ನಿಜಾಂಶ ತಿಳಿಯಲು ವಾರಣಾಸಿ ಕೋರ್ಟ್‌ ASIಗೆ ಡಿಸೆಂಬರ್‌ 18ರೊಳಗೆ ಸರ್ವೇ ಮಾಡಿ ರಿಪೋರ್ಟ್‌ ನೀಡುವಂತೆ ಆದೇಶಿಸಿತ್ತು. ಇದೀಗ ASI ಈ ಬಗ್ಗೆ ವರದಿ ಸಲ್ಲಿಸಿದೆ.

ಇತ್ತ ಮಥುರಾದ ಶ್ರೀ ಕೃಷ್ಣ ಜನ್ಮ ಭೂಮಿ ಕೇಸ್‌ನಲ್ಲಿ ಈದ್ಗಾ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನ ಮುಂದೂಡುವಂತೆ ಮುಸ್ಲಿಂ ಪರ ವಕೀಲ ಮನವಿ ಸಲ್ಲಿಸಿದ್ರು. ಇದೀಗ ಈ ಬಗ್ಗೆ ಸೋಮವಾರ ಸಂಜೆ 4ಕ್ಕೆ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ. ಅಂದ್ಹಾಗೆ ವಾರಣಾಸಿಯ ಜ್ಞಾನವಾಪಿ ಮಸೀದಿ ಮಾದರಿಯ ಸಮೀಕ್ಷೆಯನ್ನೇ ಈ ಈದ್ಗಾ ಮಸೀದಿ ಕೇಸ್‌ನಲ್ಲೂ ಮಾಡೋಕ್ಕೆ ಹೈಕೋರ್ಟ್‌ ನಿರ್ಧರಿಸಿತ್ತು.

-masthmagaa.com

Contact Us for Advertisement

Leave a Reply