ಕೊರೋನಾ ಕಾಲದಲ್ಲಿ ಆರ್ಥಿಕ ಸಂಕಷ್ಟ..! ಕಿಡ್ನಿ ಮಾರಿ ಬದುಕು.. ಅದ್ರಲ್ಲೂ ಮೋಸ!

masthmagaa.com:

ಕೊರೋನಾ ಕಾಲದಲ್ಲಿ ದುಡ್ಡಿಲ್ಲದೇ ಜನ ತಮ್ಮ ಕಿಡ್ನಿಗಳನ್ನು ಮಾರಿಕೊಂಡ ಘಟನೆ ಅಸ್ಸಾಂನಲ್ಲಿ ಬೆಳಕಿಗೆ ಬಂದಿದೆ. ಅದೂ ಒಂದೆರಡು ಕೇಸ್ ಅಲ್ಲ.. ಅಸ್ಸಾಂನ ಧರಮ್​ತಲ್​​ ಅನ್ನೋ ಗ್ರಾಮದಲ್ಲಿ ಹಲವು ಜನರು ತಮ್ಮ ಕಿಡ್ನಿಗಳನ್ನು ಮಾರಿಕೊಂಡಿದ್ದಾರೆ. ಕೊರೋನಾ ಬಂದ್ಮೇಲೆ ಅಂದ್ರೆ ಕಳೆದ ವರ್ಷದಿಂದ ಈ ಗ್ರಾಮದ ಜನರಲ್ಲಿ ದುಡ್ಡಿಲ್ಲ. ಬಡತನದ ಜೊತೆಗೆ ಸಾಲದ ಹೊರೆ.. ಮತ್ತೊಂದ್ಕಡೆ ಕಿಡ್ನಿ ಮಾರಾಟದಿಂದ ದೊಡ್ಡ ಮೊತ್ತದ ಹಣ ಸಿಗುತ್ತೆ ಅನ್ನೋ ಆಮಿಷಕ್ಕೆ ಒಳಗಾದ ಅದೆಷ್ಟೋ ಜನ ತಮ್ಮ ಕಿಡ್ನಿಗಳನ್ನು ಮಾರಿಕೊಂಡಿದ್ದಾರೆ. ಕೋಲ್ಕತ್ತಾದ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಇವರ ಕಿಡ್ನಿಯನ್ನು ಬೇರೆಯವರಿಗೆ ಕಸಿ ಮಾಡಲಾಗಿದೆ. ಆದ್ರೆ ಆರಂಭದಲ್ಲಿ ನಾಲ್ಕೂವರೆ ಲಕ್ಷ ಕೊಡ್ತೀವಿ ಅಂದೋರು ಕಿಡ್ನಿಯನ್ನು ಬೇರೆಯವರಿಗೆ ಕಸಿ ಮಾಡಿದ ಬಳಿಕ 1 ಲಕ್ಷಕ್ಕಿಂತಲೂ ಕಡಿಮೆ ಹಣ ನೀಡಿ ಮಂಗ ಮಾಡಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಮುವರು ದುಷ್ಕರ್ಮಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ದಂಧೆ ನಾಲ್ಕೈದು ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದು, ಕಳೆದ ವರ್ಷದಿಂದ ಜಾಸ್ತಿಯಾಗಿದೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply