ಒಂದು ವರ್ಷದ ಬಳಿಕ ಆಹಾರ ಧಾನ್ಯದಲ್ಲಿ ಬೆಲೆ ಇಳಿಕೆ

masthmagaa.com:

ಕಳೆದ ಒಂದು ವರ್ಷದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಅಡುಗೆ ಎಣ್ಣೆ, ಸಿರಿಧಾನ್ಯ ಮತ್ತು ಹಾಲಿನ ಉತ್ಪನ್ನಗಳಲ್ಲಿ ಇಳಿಕೆ ಕಂಡು ಬಂದಿದೆ. ಹೀಗಂತ ವಿಶ್ವಸಂಸ್ಥೆಯ ಫುಡ್ ಏಜೆನ್ಸಿ ಹೇಳಿದೆ. ಆಹಾರ ಮತ್ತು ಕೃಷಿ ಸಂಸ್ಥೆಯ ಫುಡ್ ಪ್ರೈಸ್ ಇಂಡೆಕ್ಸ್​​​ ಪ್ರತಿ ತಿಂಗಳು ಸಿರಿಧಾನ್ಯ, ಅಡುಗೆ ಎಣ್ಣೆ, ಎಣ್ಣೆ ಬೀಜ, ಹಾಲಿನ ಉತ್ಪನ್ನ, ಮಾಂಸ ಮತ್ತು ಸಕ್ಕರೆಯ ಬೆಲೆಯನ್ನು ಮಾನಿಟರ್ ಮಾಡುತ್ತೆ. ಇದರ ಮೇ ತಿಂಗಳ ಸೂಚ್ಯಂಕದಲ್ಲಿ 127.8 ಅಂಕ ದಾಖಲಾಗಿದ್ರೆ, ಜೂನ್ ತಿಂಗಳಲ್ಲಿ 124.6 ಅಂಕ ದಾಖಲಾಗಿದೆ. ಅಂದ್ರೆ ಜೂನ್ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿದೆ. ಅದೇ ಕಳೆದ ವರ್ಷದಿಂದ ಈ ವರ್ಷದ ಜೂನ್​ಗೆ ಹೋಲಿಸಿದ್ರೆ ಬೆಲೆಯ ಸೂಚ್ಯಂಕ 33 ಪರ್ಸೆಂಟ್ ಜಾಸ್ತಿಯೇ ಇದೆ. ಆದ್ರೆ ಕಳೆದ 12 ತಿಂಗಳ ಬೆಲೆಗಳಿಗೆ ಹೋಲಿಸಿದ್ರೆ ಜೂನ್ ತಿಂಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ. ಮೇ ತಿಂಗಳಿಗೆ ಹೋಲಿಸಿದ್ರೆ ಜೂನ್ ತಿಂಗಳಲ್ಲಿ ಅಡುಗೆ ಎಣ್ಣೆ ಬೆಲೆಯ ಸೂಚ್ಯಂಕದಲ್ಲಿ 9.8 ಪರ್ಸೆಂಟ್ ಇಳಿಕೆಯಾಗಿದೆ. ಸಿರಿಧಾನ್ಯ ಬೆಲೆಯ ಸೂಚ್ಯಂಕದಲ್ಲಿ 2.6 ಪರ್ಸೆಂಟ್, ಮೆಕ್ಕೆ ಜೋಳ 5 ಪರ್ಸೆಂಟ್, ಹಾಲಿನ ಉತ್ಪನ್ನದ ಬೆಲೆ ಸೂಚ್ಯಂಕದಲ್ಲಿ 1 ಪರ್ಸೆಂಟ್​ ಕಡಿಮೆಯಾಗಿದೆ. ಅದೇ ರೀತಿ 15 ತಿಂಗಳ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ಕಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಇನ್ನು ಸಕ್ಕರೆ ಬೆಲೆ ಸೂಚ್ಯಂಕ 0.9 ಪರ್ಸೆಂಟ್ ಇಳಿದಿದ್ದು, ಮಾಂಸದ ಬೆಲೆ ಸೂಚ್ಯಂಕ 2.1 ಪರ್ಸೆಂಟ್ ಜಾಸ್ತಿಯಾಗಿದೆ.

-masthmagaa.com

Contact Us for Advertisement

Leave a Reply