ಹಿಜಬ್‌ ವಿಚಾರದಲ್ಲಿ ಹೊರಗಿನವರು ಮಾತಾಡಬಾರದು: ವಿದೇಶಾಂಗ ಇಲಾಖೆ

masthmagaa.com:

ಭಾರತದ ಹಿಜಬ್ ವಿವಾದದಲ್ಲಿ ಈಗ ಅಮೆರಿಕ ಮೂಗು ತೂರಿಸಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಬ್​ ಬ್ಯಾನ್ ಮಾಡಿರೋದು ಧಾರ್ಮಿಕ ಸ್ವಾತಂತ್ರ್ಯವನ್ನ ಉಲ್ಲಂಘಿಸಿದಂತೆ. ಮುಸ್ಲಿಂ ಹೆಣ್ಣುಮಕ್ಕಳಿಗೆ ಕಳಂಕ ಉಂಟು ಮಾಡಿದಂತೆ ಅಂತ ಯುಎಸ್ ಆಫೀಸ್​ ಆಫ್​ ಇಂಟರ್​ನ್ಯಾಷನಲ್​ ರಿಲೀಜಿಯಸ್​ ಫ್ರೀಡಂನ ರಾಯಭಾರಿ ರಷದ್​ ಹುಸ್ಸೇನ್​ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರೋ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್​ ಬಗ್ಚಿ, ಹಿಜಬ್​ ವಿಚಾರ ಕೋರ್ಟ್​​ನಲ್ಲಿದೆ. ಭಾರತದ ಬಗ್ಗೆ ಗೊತ್ತಿರೋರಿಗೆ ವಾಸ್ತವತೆ ಬಗ್ಗೆ ಮೆಚ್ಚುಗೆ ಹೊಂದಿರುತ್ತಾರೆ. ನಮ್ಮ ಆಂತರಿಕ ವಿಚಾರಗಳ ಬಗ್ಗೆ ಮೋಟಿವೇಟೆಡ್​ ಕಾಮೆಂಟ್​​ಗಳು ಸ್ವಾಗತಾರ್ಹ ಅಲ್ಲ ಅಂತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply