ವಿವಿಯಲ್ಲಿ ಹಿಜಬ್ ಧರಿಸಿ ನಮಾಜ್ ಮಾಡಿದ ವಿದ್ಯಾರ್ಥಿನಿ!

masthmagaa.com:

ದೇಶದಲ್ಲಿ ಹಿಜಬ್ ಮತ್ತು ನಮಾಜ್ ವಿವಾದ ಬಗೆಹರಿಯೋ ಲಕ್ಷಣವೇ ಕಾಣಿಸ್ತಿಲ್ಲ. ಮಧ್ಯಪ್ರದೇಶದ ಯುನಿವರ್ಸಿಟಿಯೊಂದ್ರಲ್ಲಿ ಯುವತಿಯೊಬ್ಬರು ಹಿಜಬ್ ಧರಿಸಿಕೊಂಡು ತರಗತಿಯ ಒಳಗೆ ನಮಾಜ್ ಮಾಡಿದ್ದಾರೆ. ಡಾಕ್ಟರ್ ಹರಿಸಿಂಗ್ ಗೌರ್ ಸಾಗರ್ ಯುನಿವರ್ಸಿಟಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಫುಲ್ ವೈರಲ್ ಆಗಿದೆ. ಇದ್ರ ಬೆನ್ನಲ್ಲೇ ಹಿಂದೂ ಸಂಘಟನೆ ಹಿಂದೂ ಜಾಗರಣ್​ ಮಂಚ್​, ಯುನಿವರ್ಸಿಟಿಯ ಆಡಳಿತ ಮಂಡಳಿಗೆ ದೂರು ನೀಡಿದ್ದು, ವಿದ್ಯಾರ್ಥಿನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಕಾಲೇಜು ಆಡಳಿತ ಮಂಡಳಿ, ನಾವು ಈಗಾಗಲೇ ಒಂದು ತಂಡವನ್ನು ರಚಿಸಿದ್ದು, ಘಟನೆ ಸಂಬಂಧ ತನಿಖೆಗೆ ಸೂಚಿಸಿದ್ದೀವಿ ಅಂತ ಹೇಳಿದೆ. ಅಷ್ಟೇ ಅಲ್ಲ. ಧಾರ್ಮಿಕ ವಿಧಿ ವಿಧಾನ ಏನೇ ಇದ್ರೂ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಿ.. ವಿವಿ ಇರೋದು ಓದೋಕೆ ಅಂತ ವಿದ್ಯಾರ್ಥಿನಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೀವಿ ಅಂತ ಕೂಡ ತಿಳಿಸಿದೆ. ಈ ಕಾಲೇಜಿನಲ್ಲಿ ಯಾವುದೇ ರೀತಿಯ ಡ್ರೆಸ್​ಕೋಡ್ ಇಲ್ಲ. ಆದ್ರೆ ಎಲ್ಲರೂ ಧಾರ್ಮಿಕ ಆಚರಣೆ ನಡೆಸಲು ಕಾಲೇಜಿನಲ್ಲಿ ಅವಕಾಶವಿಲ್ಲ..ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್​ ಕೂಡ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಬೇಕು. ಹಿಜಬ್ ಧರಿಸುವಂತಿಲ್ಲ ಅಂತ ತೀರ್ಪು ನೀಡಿತ್ತು.

-masthmagaa.com

Contact Us for Advertisement

Leave a Reply