ಕಾಂಗ್ರೆಸ್ ಯಾತ್ರೆ ವೇಳೆ ಹಿಂಸಾಚಾರ: ಬ್ಯಾರಿಕೇಡ್‌ ಮುರಿದ ʼಕೈʼ ಸೇನೆ!

masthmagaa.com:

ಭಾರತ ಜೋಡೊ ನ್ಯಾಯ ಯಾತ್ರೆ ಅಸ್ಸಾಂನ ಗುವಾಹಟಿ ನಗರಕ್ಕೆ ಪ್ರವೇಶಿಸದಂತೆ ಅಲ್ಲಿನ ರಾಜ್ಯ ಸರ್ಕಾರ ತಡೆದಿದೆ. ಇದ್ರಿಂದ ಆಕ್ರೋಶಗೊಂಡ ಕೈ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನ ಮುರಿದು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲಿಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ 5 ಸಾವಿರ ಕೈ ಕಾರ್ಯಕರ್ತರು ಜಮಾಯಿಸಿದ್ರು. ಅಂದ್ಹಾಗೆ ಗುವಾಹಟಿ ನಗರದ ಮುಖ್ಯ ಬೀದಿಗಳಲ್ಲಿ ಪ್ರವೇಶಿಸಲು ಕಾಂಗ್ರೆಸ್‌ಗೆ ಅಸ್ಸಾಂ ಸಿಎಂ ಹಿಮಂತ್‌ ಬಿಸ್ವಾ ಸರ್ಮಾ ಸರ್ಕಾರ ಅನುಮತಿ ನೀಡಿರ್ಲಿಲ್ಲ. ಮಂಗಳವಾರ ವರ್ಕಿಂಗ್‌ ಡೇ ಇದೆ, ಆದ್ರಿಂದ ಹೈವೇ ಬಳಸಿ ದಕ್ಷಿಣ ಅಸ್ಸಾಂ ಕಡೆಗೆ ಹೋಗಿ ಅಂತ ಕೇಳಿಕೊಂಡಿತ್ತು. ಆದ್ರೆ ಕಾಂಗ್ರೆಸ್‌ ಇದಕ್ಕೆ ಕ್ಯಾರೆ ಅಂದಿಲ್ಲ. ಇನ್ನು ಘಟನೆ ಬಗ್ಗೆ ಮಾತನಾಡಿರೋ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ʻನಾವು ಬ್ಯಾರಿಕೇಡ್‌ ಮುರಿದಿದ್ದೇವೆ ಹೊರತು ಕಾನೂನನಲ್ಲ. ಅಸ್ಸಾಂ ಸಿಎಂ ಭ್ರಷ್ಟ ಸಿಎಂಗಳಲ್ಲೊಬ್ಬರುʼ ಅಂತ ಕಿಡಿಕಾರಿದ್ದಾರೆ. ಇತ್ತ ಘಟನೆಯನ್ನ ಖಂಡಿಸಿರೋ ಅಸ್ಸಾಂ ಸಿಎಂ ಹಿಮಂತ್‌ ಬಿಸ್ವ ಸರ್ಮಾ, ʻಇದು ಅಸ್ಸಾಮಿ ಸಂಸ್ಕೃತಿ ಅಲ್ಲ. ನಮ್ಮ ಜನರನ್ನ ಪ್ರವೋಕ್‌ ಮಾಡಲಾಗಿದೆ. ಇಂತಹ ನಕ್ಸಲೀಯರ ತಂತ್ರಗಳು ನಮ್ಮಲ್ಲಿಲ್ಲ. ಈ ಸಂಬಂಧ ಅಸ್ಸಾಂ ಡಿಜಿಪಿಗೆ ರಾಹುಲ್‌ ಗಾಂಧಿ ವಿರುದ್ದ ಕೇಸ್‌ ದಾಖಲಿಸುವಂತೆ ಆದೇಶಿಸಿದ್ದೇನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply