ಅಮೆರಿಕ: ಮತ್ತೊಂದು ಹಿಂದೂ ದೇವಸ್ಥಾನದ ಮೇಲೆ ಖಲಿಸ್ತಾನಿ ಅಟ್ಯಾಕ್‌!

masthmagaa.com:

ಇತ್ತೀಚೆಗೆ ಅಮೆರಿಕದಲ್ಲಿರೋ ಹಿಂದೂ ದೇವಸ್ಥಾನಗಳ ಮೇಲೆ ಟಾರ್ಗೆಟ್‌ ಮಾಡೋದನ್ನ ಖಲಿಸ್ತಾನಿ ಬೆಂಬಲಿಗರು ಜಾಸ್ತಿ ಮಾಡ್ತಿದ್ದಾರೆ. ಅಲ್ಲಿನ ಕ್ಯಾಲಿಫೋರ್ನಿಯಾದ ಶೆರಾವಾಲಿ ದೇವಸ್ಥಾನದ ಗೋಡೆಗಳ ಮೇಲೆ ಗ್ರಫಿಟಿ (graffiti) ಅಂದ್ರೆ ಬಣ್ಣದ ಸ್ಪ್ರೇಗಳನ್ನ ಬಳಸಿ ವಿರೂಪಗೊಳಿಸಿದ್ದಾರೆ. ಹೀಗಂತ ಅಲ್ಲಿನ ಹಿಂದೂ ಅಮೆರಿಕನ್‌ ಫೌಂಡೇಷನ್‌ ಮಾಹಿತಿ ನೀಡಿದೆ. ಡಿಸೆಂಬರ್‌ 23 ರಂದು ಇದೇ ರೀತಿ ಖಲಿಸ್ತಾನಿ ಬೆಂಬಲಿಗರು ಅಲ್ಲಿನ ಸ್ವಾಮಿನಾರಾಯಣ ದೇವಸ್ಥಾನದ ಗೋಡೆ ವಿರೂಪಗೊಳಿಸಿದ್ರು. ಇದೀಗ ಮತ್ತೊಂದು ಹಿಂದೂ ದೇವಸ್ತಾನವನ್ನ ಟಾರ್ಗೆಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply